Thursday, June 4, 2026
Homeಕರಾವಳಿವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಆರೋಪ: ಬಂಟ್ವಾಳದಲ್ಲಿ ಯುವಕನ ಬಂಧನ

ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಆರೋಪ: ಬಂಟ್ವಾಳದಲ್ಲಿ ಯುವಕನ ಬಂಧನ

- Advertisement -
- Advertisement -

ಬಂಟ್ವಾಳ: ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಹಾಗೂ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧ ಪಟ್ಟಂತೆ ಬಂಟ್ವಾಳದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ.

ಮುಹಮ್ಮದ್ ಅಯ್ಯೂಬ್ ಬಂಧಿತ ಆರೋಪಿ. ಈತ ತಲಪಾಡಿಯ ವಿವಾಹಿತ ಮಹಿಳೆಯೊಬ್ಬರ‌ನ್ನು ಇನ್ ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ಮದುವೆಯಾಗುವಂತೆ ಪೀಡಿಸುತ್ತಿದ್ದ. ಇದನ್ನು ಮಹಿಳೆ ನಿರಾಕರಿಸಿದರೂ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇತ್ತೀಚಿಗೆ ಕಾರ್ಯ ನಿಮಿತ್ತ ಬಿ.ಸಿ.ರೋಡ್ ಗೆ ಬಂದ ಮಹಿಳೆಯನ್ನು ತನ್ನ ಕಾರಿನಲ್ಲಿ ಬಲವಂತವಾಗಿ ಕೂರಿಸಿ ಮಂಗಳೂರು ಭಾಗದಲ್ಲಿ ಸುತ್ತಾಡಿಸಿ ಮೊಬೈಲ್ ನಲ್ಲಿ ಫೋಟೊಗಳನ್ನು ತೆಗೆದು ಬಳಿಕ ತಲಪಾಡಿಯಲ್ಲಿ ಬಿಟ್ಟುಹೋಗಿದ್ದ ಎನ್ನಲಾಗಿದೆ.  ಆ ಬಳಿಕ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ವಿಷಯ ಯಾರಲ್ಲೂ ಹೇಳಿದಂತೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಮಹಿಳೆಯ ದೂರಿನಂತೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ

- Advertisement -

Latest News

error: Content is protected !!