Monday, June 8, 2026
Homeಕರಾವಳಿಮಂಗಳೂರುನನ್ನ ಮೇಲೆ ನೂರು ಕೇಸ್ ಬಿದ್ರೂ ನಾನು ಹಿಂದೂಗಳಿಗಾಗಿ ಕೆಲಸ ಮಾಡುತ್ತೇನೆ: ಶಾಸಕ ಹರೀಶ್ ಪೂಂಜ...

ನನ್ನ ಮೇಲೆ ನೂರು ಕೇಸ್ ಬಿದ್ರೂ ನಾನು ಹಿಂದೂಗಳಿಗಾಗಿ ಕೆಲಸ ಮಾಡುತ್ತೇನೆ: ಶಾಸಕ ಹರೀಶ್ ಪೂಂಜ ಹೇಳಿಕೆ

- Advertisement -
- Advertisement -

ಮಂಗಳೂರು; ನನ್ನ ಮೇಲೆ ನೂರು ಕೇಸ್ ಬಿದ್ರೂ ನಾನು ಹಿಂದೂಗಳಿಗಾಗಿ ಕೆಲಸ ಮಾಡುತ್ತೇನೆ: ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನನ್ನ ವಿರುದ್ಧ 8-9 ಮೊಕದ್ದಮೆಗಳನ್ನು ದಾಖಲಿಸಲಾಗಿದೆ.  ಆದರೆ ಇವುಗಳ ಪೈಕಿ ಒಂದು ಪ್ರಕರಣದಲ್ಲೂ ನನ್ನ ಸ್ವಂತದ ಕೆಲಸಕ್ಕಾಗಿ ಕೇಸ್ ಬಿದ್ದಿಲ್ಲ, ಹಿಂದೂ ಕಾರ್ಯಕರ್ತರ ರಕ್ಷಣೆಗಾಗಿ ಮತ್ತು ಹಿಂದೂ ಸಮಾಜದ ಹಿತಕ್ಕಾಗಿ ಹೋರಾಡಿದಾಗ ನನ್ನ ವಿರುದ್ಧ ಎಫ್​ಐಅರ್ ದಾಖಲಾಗಿದೆ. ಇಂತಹ 100 ಕೇಸು ಬಿದ್ದರೂ ಹಿಂದೂಗಳಿಗಾಗಿ ಹೋರಾಡುವುದನ್ನು ನಿಲ್ಲಿಸಲ್ಲ ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.

ನಾನು ಹಿಂದೂ ಸಮಾಜಕ್ಕಾಗಿ ಕೆಲಸ ಮಾಡುವವನು, ಅದಕ್ಕಾಗಿ ನನ್ನ ಶಾಸಕ ಸ್ಥಾನ ಹೋದರೂ ಚಿಂತೆಯಿಲ್ಲ, ಕೆಲಸ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ.

- Advertisement -

Latest News

error: Content is protected !!