Monday, June 8, 2026
Homeಕರಾವಳಿನೇತ್ರಾವತಿ ನದಿ ನೀರಿನಲ್ಲಿ ಗಂಡಸಿನ ಮೃತದೇಹವೊಂದು ಪತ್ತೆ

ನೇತ್ರಾವತಿ ನದಿ ನೀರಿನಲ್ಲಿ ಗಂಡಸಿನ ಮೃತದೇಹವೊಂದು ಪತ್ತೆ

- Advertisement -
- Advertisement -

ಪಾಣೆಮಂಗಳೂರು: ಇಲ್ಲಿನ ರೈಲ್ವೆ ಮೇಲ್ಸೇತುವೆಯ ಅಡಿಭಾಗದ ನೇತ್ರಾವತಿ ನದಿ ನೀರಿನಲ್ಲಿ ಗಂಡಸಿನ ಮೃತದೇಹವೊಂದು ಪತ್ತೆಯಾಗಿದ್ದು, ಮೃತಪಟ್ಟ ವ್ಯಕ್ತಿಯ ವಯಸ್ಸು 40-45ರ ಹಾಸುಪಾಸ್ಸೆಂದು ಅಂದಾಜಿಸಲಾಗಿದೆ.

ಮೃತ ವ್ಯಕ್ತಿಯ ಗುರುತು ಪರಿಚಯ ಅಲಭ್ಯವಾಗಿದೆ.

ತಲಪಾಡಿ-ಪೊನ್ನೋಡಿ ನಿವಾಸಿ ಪ್ರಥಮ್ ಶೆಟ್ಟಿ ಎಂಬವರು ಬಿ. ಮೂಡ ಗ್ರಾಮದ ಕೈಕುಂಜೆ ರೈಲ್ವೆ ಹಳಿಯ ಬ್ರಿಡ್ಜ್ ಮೇಲೆ ನಂದಾವರಕ್ಕೆ ನಡೆದುಕೊಂಡು ಹೋಗುತ್ತಿದ್ದ ಸಮಯ ನೇತ್ರಾವತಿ ನದಿಯ ತಟದ ನೀರಿನಲ್ಲಿ ಮೃತದೇಹ ತೇಲಿಕೊಂಡಿರುವುದನ್ನು ನೋಡಿದ್ದಾರೆ. ನಂತರದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಈಜುಗಾರರ ಸಹಾಯದಿಂದ ಮೃತ ದೇಹವನ್ನು ನದಿ ದಡಕ್ಕೆ ತರಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಬಂಟ್ವಾಳ ನಗರ ಠಾಣಾ ಪೊಲೀಸ್ ಪ್ರಕಟಣೆ ತಿಳಿಸಿದೆ.

- Advertisement -

Latest News

error: Content is protected !!