Friday, July 24, 2026
Homeಕರಾವಳಿದಕ್ಷಿಣ ಕನ್ನಡದಲ್ಲಿ ಅಪಘಾತ ತಡೆಗೆ ಅತ್ಯಾಧುನಿಕ 'ಆಟೋಮ್ಯಾಟಿಕ್ ನಿಗಾ ಕ್ಯಾಮೆರಾ'; ಜಿಲ್ಲಾ ಪೊಲೀಸರ ಮಹತ್ವದ ಕ್ರಮ

ದಕ್ಷಿಣ ಕನ್ನಡದಲ್ಲಿ ಅಪಘಾತ ತಡೆಗೆ ಅತ್ಯಾಧುನಿಕ ‘ಆಟೋಮ್ಯಾಟಿಕ್ ನಿಗಾ ಕ್ಯಾಮೆರಾ’; ಜಿಲ್ಲಾ ಪೊಲೀಸರ ಮಹತ್ವದ ಕ್ರಮ

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಯನ್ನು ತಡೆಯಲು ಜಿಲ್ಲಾ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದು, ವಿಟ್ಲ, ಉಪ್ಪಿನಂಗಡಿ, ಸುಳ್ಯ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆ ಮತ್ತು ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ನಿಗಾ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇವು ಜುಲೈ 23, 2026 ರಿಂದ ಕಾರ್ಯಾರಂಭ ಮಾಡಿವೆ.

ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಈ ಕ್ಯಾಮೆರಾಗಳು ಅತಿವೇಗದ ಚಾಲನೆ, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸದಿರುವುದು, ಚಾಲನೆ ವೇಳೆ ಮೊಬೈಲ್ ಬಳಕೆ ಹಾಗೂ ತಪ್ಪು ದಿಕ್ಕಿನಲ್ಲಿ ವಾಹನ ಚಲಾಯಿಸುವುದನ್ನು ತಕ್ಷಣವೇ ಪತ್ತೆಹಚ್ಚಿ ದಾಖಲಿಸುತ್ತವೆ.

ಹಾಗೆಯೇ ಉಲ್ಲಂಘನೆ ದೃಢಪಟ್ಟ ಬಳಿಕ ವಾಹನ ಸಂಖ್ಯೆಯ ಆಧಾರದ ಮೇಲೆ ಮಾಲೀಕರಿಗೆ ದಂಡದ ನೋಟಿಸ್ ಕಳುಹಿಸಲಾಗುತ್ತದೆ. ವಾಹನ ಸವಾರರಿಗೆ ದಂಡ ವಿಧಿಸುವುದಕ್ಕಿಂತ ಹೆಚ್ಚಾಗಿ ಅವರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿ ಅಮೂಲ್ಯ ಜೀವಗಳನ್ನು ರಕ್ಷಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!