Friday, May 17, 2024
Homeತಾಜಾ ಸುದ್ದಿಮಂಗಳೂರು: ರಾ.ಹೆ.169ರ ಕುಲಶೇಖರ-ಸಾಣೂರು ನಡುವೆ ಚತುಷ್ಪಥ ಕಾಮಗಾರಿ ಹಿನ್ನೆಲೆ: ಮರಗಳ ಜಂಟಿ ಸಮೀಕ್ಷೆಗೆ ಪರಿಸರವಾದಿಗಳ ಆಗ್ರಹ

ಮಂಗಳೂರು: ರಾ.ಹೆ.169ರ ಕುಲಶೇಖರ-ಸಾಣೂರು ನಡುವೆ ಚತುಷ್ಪಥ ಕಾಮಗಾರಿ ಹಿನ್ನೆಲೆ: ಮರಗಳ ಜಂಟಿ ಸಮೀಕ್ಷೆಗೆ ಪರಿಸರವಾದಿಗಳ ಆಗ್ರಹ

spot_img
- Advertisement -
- Advertisement -

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ಕುಲಶೇಖರ-ಸಾಣೂರು ನಡುವೆ ಚತುಷ್ಪಥ ಕಾಮಗಾರಿ ಹಿನ್ನೆಲೆಯಲ್ಲಿ ಬಿಕರ್ನಕಟ್ಟೆಯಿಂದ ಮಿಜಾರು ವರೆಗಿನ ಮರಗಳನ್ನು ಕಡಿಯುವ ಮೊದಲು ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಮತ್ತು ಪರಿಸರಾಸಕ್ತರ ಪಾಲ್ಗೊಳ್ಳುವಿಕೆಯಲ್ಲಿ ಸಮೀಕ್ಷೆ ನಡೆಸಬೇಕು ಎಂದು ಪರಿಸರಾಸಕ್ತರು ಆಗ್ರಹಿಸಿದ್ದಾರೆ. ಮರ ಕಡಿಯುವ ಪೂರ್ವಭಾವಿಯಾಗಿ ಬುಧವಾರ ಹೊಗೆಬಜಾರ್‌ನ ಮಂಗಳೂರು ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಈ ಬಗ್ಗೆ ಒತ್ತಾಯಿಸಲಾಯಿತು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ. ಸುಬ್ರಹ್ಮಣ್ಯ ಮಾತನಾಡಿ, ಕುಲ ಶೇಖರ- ಸಾಣೂರು ನಡುವಿನ ಹೆದ್ದಾರಿಯಲ್ಲಿ ಬಿಕರ್ನಕಟ್ಟೆಯಿಂದ ಮಿಜಾರು ನಡುವಿನ ಪ್ರದೇಶ ಮಂಗಳೂರು ವಲಯ ಅರಣ್ಯಾಧಿ ಕಾರಿಗಳ ವ್ಯಾಪ್ತಿಯಲ್ಲಿದೆ. ಈ ಭಾಗದ 18.5 ಕಿ.ಮೀ ಸರಕಾರಿ ಜಾಗದಲ್ಲಿ 2,660 ಮರಗಳನ್ನು ಗುರುತಿಸಲಾಗಿದೆ. ಖಾಸಗಿ ಜಾಗದ ಮರಗಳನ್ನು ಇನ್ನಷ್ಟೇ ಗುರುತಿಸಬೇಕಾಗಿದೆ. 50ಕ್ಕಿಂತ ಹೆಚ್ಚು ಮರಗಳನ್ನು ಕಡಿಯುವ ಮೊದಲು ಸಾರ್ವಜನಿಕ ಅಹವಾಲು ಸಭೆ ನಡೆಸು ವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದೆ. ಎಲ್ಲ ಅಗತ್ಯ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ಸಾರ್ವಜನಿಕರ ಸಹಕಾರ ದೊಂದಿಗೆ ನಡೆಸಲಾಗುತ್ತಿದೆ ಎಂದರು.

ಅನಿತಾ ಭಂಡಾರ್ಕರ್‌ ಮತ್ತು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ (ಎನ್‌ಸಿಇಎಫ್) ಇತರ ಕೆಲವು ಸದಸ್ಯರು ಮಾತನಾಡಿ, ರಸ್ತೆ ವಿಸ್ತರಣೆ ಸೇರಿದಂತೆ ವಿವಿಧ ಕಾಮಗಾರಿಗಳ ನೆಪದಲ್ಲಿ ಮರ ಗಳ ನಾಶ ನಡೆಯುತ್ತಲೇ ಇದೆ. ಈಗ ಬಿಕರ್ನಕಟ್ಟೆ-ಮಿಜಾರು ನಡುವಿನ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ಗುರುತಿಸಿ ರುವ ಮರಗಳ ಸಂಖ್ಯೆಯ ಬಗ್ಗೆ ಸಂದೇಹ ವಿದೆ. ಈ ಅಹವಾಲು ಸಭೆಯನ್ನು ತರಾತುರಿ ಯಲ್ಲಿ ಕರೆಯಲಾಗಿದೆ. ಸಾರ್ವ ಜನಿಕರಿಗೆ ಸಮರ್ಪಕವಾಗಿ ಮಾಹಿತಿ ನೀಡಿಲ್ಲ. ಅಲ್ಲದೆ ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕಂದಾಯ ಇಲಾಖೆ, ನಗರ ಅರಣ್ಯ ಸಮಿತಿಯವರನ್ನು ಸೇರಿಸಿಕೊಂಡು ಸಮೀಕ್ಷೆ ನಡೆಸಬೇಕು ಎಂದು ತಿಳಿಸಿದರು.

- Advertisement -
spot_img

Latest News

error: Content is protected !!