Sunday, May 5, 2024
Homeಕರಾವಳಿರಾಜ್ಯ ಎನ್‌ಎಸ್‌ಎಸ್ ಘಟಕಕ್ಕೆ 42,800 ಸ್ವಯಂ ಸೇವಕರ ಸೇರ್ಪಡೆಗೆ ಅವಕಾಶ: ದೈನಂದಿನ ಚಟುವಟಿಕೆ ಮತ್ತು ವಿಶೇಷ...

ರಾಜ್ಯ ಎನ್‌ಎಸ್‌ಎಸ್ ಘಟಕಕ್ಕೆ 42,800 ಸ್ವಯಂ ಸೇವಕರ ಸೇರ್ಪಡೆಗೆ ಅವಕಾಶ: ದೈನಂದಿನ ಚಟುವಟಿಕೆ ಮತ್ತು ವಿಶೇಷ ಶಿಬಿರಗಳ ಅನುದಾನ ಪರಿಷ್ಕರಣೆ

spot_img
- Advertisement -
- Advertisement -

ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧೀನದಲ್ಲಿ ಬರುವ ರಾಷ್ಟ್ರೀಯ ಸೇವಾ ಯೋಜನೆಯ ಕೋಶಕ್ಕೆ ಹೆಚ್ಚುವರಿಯಾಗಿ 42,800 ಸ್ವಯಂ ಸೇವಕರನ್ನು ಸೇರಿಸಿಕೊಳ್ಳಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ.

ಈ ವರೆಗೆ ರಾಜ್ಯಕ್ಕೆ 2,78,200 ಸ್ವಯಂಸೇವಕರ ಸಂಖ್ಯಾಬಲ ಹಂಚಿಕೆ ಮಾಡಲಾಗಿದ್ದು, ಇದುವರೆಗೆ ರಾಜ್ಯ ಎನ್ ಎಸ್ ಎಸ್ ಕೋಶ 5 ಲಕ್ಷ ಸ್ವಯಂಸೇವಕರನ್ನು ನೋಂದಾಯಿಸಿತ್ತು.

2022-23 ಸಾಲಿಗೆ ಹೆಚ್ಚುವರಿ ಸ್ವಯಂಸೇವಕರ ಹಂಚಿಕೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚುವರಿಯಾಗಿ 42,800 ಸ್ವಯಂಸೇವಕರ ಸಂಖ್ಯಾಬಲ ಹಂಚಿಕೆ ಮಾಡಲಾಗಿದೆ.

ಈ ಮೂಲಕ ರಾಜ್ಯದ ಎನ್‌‌ಎಸ್ಎಸ್ ಸ್ವಯಂ ಸೇವಕರ ಸಂಖ್ಯೆ 3,21,000ಕ್ಕೆ ಏರಿಕೆಯಾಗಿದ್ದು, ಹೆಚ್ಚುವರಿ ಸ್ವಯಂಸೇವಕರ ಸಂಖ್ಯಾಬಲದ ಹಂಚಿಕೆಯಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.

ಈ ಮಧ್ಯೆ ರಾಷ್ಟ್ರೀಯ ಸೇವಾ ಯೋಜನೆಯ ದೈನಂದಿನ ಚಟುವಟಿಕೆಗಳಿಗೆ ಮತ್ತು ವಿಶೇಷ ಶಿಬಿರಗಳಿಗೆ ಪ್ರತಿ ಸ್ವಯಂಸೇವಕರಿಗೆ ನೀಡುತ್ತಿದ್ದ ಅನುದಾನ ಪರಿಷ್ಕರಣೆ ಮಾಡಲಾಗಿದ್ದು, ದೈನಂದಿನ ಚಟುವಟಿಕೆಗಳಿಗೆ 250 ರೂ. ನಿಂದ 400 ರೂ, ವಿಶೇಷ ಶಿಬಿರಗಳಿಗೆ 450 ರೂ. ನಿಂದ 700 ರೂ. ಗಳಿಗೆ ಹೆಚ್ಚಳ ಮಾಡಲಾಗಿದೆ.

ಎನ್ ಎಸ್ ಎಸ್ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಒಟ್ಟು 24.75 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.

- Advertisement -
spot_img

Latest News

error: Content is protected !!