Friday, July 17, 2026
Homeಕರಾವಳಿಮಂಗಳೂರು : ಇಂಜಿನಿಯರಿಂಗ್ ಓದಿದ್ರೂ ಸಿಗದ ಕೆಲಸ, ಮನನೊಂದು ಯುವಕ ನಾಪತ್ತೆ

ಮಂಗಳೂರು : ಇಂಜಿನಿಯರಿಂಗ್ ಓದಿದ್ರೂ ಸಿಗದ ಕೆಲಸ, ಮನನೊಂದು ಯುವಕ ನಾಪತ್ತೆ

- Advertisement -
- Advertisement -

ಮಂಗಳೂರು : ಇಂಜಿನಿಯರಿಂಗ್ ಓದಿದ್ರೂ ಕೆಲಸ ಸಿಗದ ಹಿನ್ನೆಲೆ ಮಾನಸಿಕವಾಗಿ ನೊಂದಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಬಿಜೈ ನಿವಾಸಿ ಆಯುಷ್ ಉಮೇಶ್ (22) ನಾಪತ್ತೆಯಾಗಿರುವ ಯುವಕ.

ಬಿಇ (ಮೆಕ್ಯಾನಿಕಲ್ ಇಂಜಿನಿಯರಿಂಗ್) ಪದವಿ ಪೂರೈಸಿದ್ದ ಆಯುಷ್ ಗೆ ಸರಿಯಾದ ಉದ್ಯೋಗ ಸಿಗದೆ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ. ಮೇ 2ರಂದು ಬೆಳಗ್ಗೆ 11ಕ್ಕೆ ಮನೆಯಿಂದ ಸ್ಕೂಟರ್‌ನಲ್ಲಿ ತೆರಳಿದ ಈತ ನಾಪತ್ತೆಯಾಗಿದ್ದಾನೆ ಎಂದು ಉರ್ವ ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ.

5.7 ಅಡಿ ಎತ್ತರ, ಸಪೂರ ಶರೀರ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು ಕನ್ನಡಕ ಧರಿಸಿದ್ದಾರೆ. ಮುಖದಲ್ಲಿ ಗಡ್ಡ, ಮೀಸೆ ಇದೆ. ಸುಮಾರು 2 ಇಂಚು ಉದ್ದದ ಕಪ್ಪು ತಲೆ ಕೂದಲು ಹೊಂದಿದ್ದು ಕಪ್ಪು ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಶಾರ್ಟ್ ಧರಿಸಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಭಾಷೆ ಮಾತನಾಡುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!