Thursday, June 25, 2026
Homeತಾಜಾ ಸುದ್ದಿಹಾಸನ: ಜನರತ್ತ ನುಗ್ಗಿದ ಕಾಡಾನೆ; ಭಯದಿಂದ ಓಡಿದ ಜನ

ಹಾಸನ: ಜನರತ್ತ ನುಗ್ಗಿದ ಕಾಡಾನೆ; ಭಯದಿಂದ ಓಡಿದ ಜನ

- Advertisement -
- Advertisement -

ಹಾಸನ: ಸಕಲೇಶಪುರದ ಹಲಸುಲಿಗೆ ಗ್ರಾಮದಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಯೊಂದು ಜನರ ಗದ್ದಲದ ಹಿನ್ನಲೆಯಲ್ಲಿ ಜನರತ್ತ ನುಗ್ಗಿದ ಪರಿಣಾಮ ಅಲ್ಲಿದ್ದ ಜನರು ಭಯಭೀತರಾಗಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡಿ ಹೋದ ಘಟನೆ ನಡೆದಿದೆ.


 ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ಒಂಟಿ ಸಲಗವೊಂದು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ, ಕಾಡಾನೆಯನ್ನು ನೋಡುತ್ತಿದ್ದ ಗ್ರಾಮಸ್ಥರು ಮಧ್ಯದಲ್ಲಿ ನಿಂತಿದ್ದರು.  ರಸ್ತೆದಾಟಲು ಪ್ರಯತ್ನಿಸುತ್ತಿದ್ದ ಆನೆ ಜನರ ಕೂಗಾಟದಿಂದ ಸಿಟ್ಟಿಗೆದ್ದು, ಜನರತ್ತ ನುಗ್ಗಿದೆ. ಪರಿಣಾಮ ರಕ್ಷಣೆ ಪಡೆಯಲು ಅಲ್ಲಿದ್ದ ಜನರು ಸ್ಥಳದಿಂದ ತುಸು ದೂರ ಓಡಿ ಹೋಗುವ ಪರಿಸ್ಥಿತಿ ನಿರ್ಮಾಣವಾಯಿತು.


 ಜನರು ಹೋದ ಬಳಿಕ ಕಾಡಾನೆ ರಸ್ತೆ ದಾಟಿ ತೋಟವೊಂದಕ್ಕೆ ನುಗ್ಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಡಾನೆಗಳನ್ನು ಓಡಿಸಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

- Advertisement -

Latest News

error: Content is protected !!