Saturday, June 13, 2026
Homeಕರಾವಳಿಬೆಳ್ತಂಗಡಿ : ಪುದುವೆಟ್ಟು ಗ್ರಾಮದಲ್ಲಿ ಆನೆಗಳ ಓಡಾಟ : ಜನರಲ್ಲಿ ಆತಂಕ

ಬೆಳ್ತಂಗಡಿ : ಪುದುವೆಟ್ಟು ಗ್ರಾಮದಲ್ಲಿ ಆನೆಗಳ ಓಡಾಟ : ಜನರಲ್ಲಿ ಆತಂಕ

- Advertisement -
- Advertisement -

ಬೆಳ್ತಂಗಡಿ: ಪುದುವೆಟ್ಟು ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಕಾಡಾನೆಗಳು ಓಡಾಡುತ್ತಿವೆ. ನೆರಿಯ-ಶಿಶಿಲ ಅರಣ್ಯ ಭಾಗದಿಂದ ಪ್ರತಿದಿನ ರಾತ್ರಿ 7 ಗಂಟೆ ಸುಮಾರಿಗೆ ಗ್ರಾಮದ ಮಿಯ್ಯರು ಭಾಗದಲ್ಲಿ ಎರಡು ಆನೆಗಳು ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದಾರೆ. ಗುರುವಾರ ರಾತ್ರಿಯಿಂದ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಮಠದ ಬೈಲು ಮೇಲಿನ ಕರ್ಪಾಜೆ, ಕೇರಿಮಾರು, ಪುದ್ದೊಟ್ಟು ಭಾಗದಲ್ಲಿ ಆನೆಗಳು ಸಂಚರಿಸುತ್ತಿವೆ.

ಇದುವರೆಗೆ ದೊಡ್ಡ ಮಟ್ಟದಲ್ಲಿ ಕೃಷಿ ಹಾನಿ ಮಾಡಿಲ್ಲ. ಆದರೆ, ಸಂಜೆ 6 ಗಂಟೆ ಬಳಿಕ ರಸ್ತೆಯಲ್ಲಿ ಓಡಾಡಲು ಗ್ರಾಮಸ್ಥರು ಹೆದರುತ್ತಿದ್ದಾರೆ. ಆನೆಗಳ ಸಂಚಾರ ಆರಂಭವಾಗುತ್ತಿದ್ದಂತೆ ಸ್ಫೋಟಕಗಳನ್ನು ಸಿಡಿಸಿ ಅವುಗಳನ್ನು ದೂರ ಓಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಶನಿವಾರ ರಾತ್ರಿಯೂ ಕರ್ಪಾಜೆ ಭಾಗದಲ್ಲಿ ಆನೆಗಳು ಸಂಚರಿಸಿವೆ.ಅರಣ್ಯ ಇಲಾಖೆ ಆನೆಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!