Sunday, June 7, 2026
Homeತಾಜಾ ಸುದ್ದಿಕಾಫಿ ತೋಟದಲ್ಲೇ ಕುಂಭಕರ್ಣನಂತೆ ಗಡದ್ ನಿದ್ದೆಗೆ ಜಾರಿದ ಆನೆಗಳು...

ಕಾಫಿ ತೋಟದಲ್ಲೇ ಕುಂಭಕರ್ಣನಂತೆ ಗಡದ್ ನಿದ್ದೆಗೆ ಜಾರಿದ ಆನೆಗಳು…

- Advertisement -
- Advertisement -

ಹಾಸನ ಹಾಸನ ಜಿಲ್ಲೆಯಲ್ಲಿ ಆನೆಗಳ ಹಾವಳಿ ಎಷ್ಟರಮಟ್ಟಿಗಿದೆ ಅಂತಾ ಬಿಡಿಸಿ ಹೇಳಬೇಕಾಗಿಲ್ಲ. ಗಜಪಡೆಯಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುವ ಜಿಲ್ಲೆಗಳಲ್ಲಿ ಒಂದು ಹಾಸನ. ಇದೀಗ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದಲ್ಲಿ ಕಳೆದ ಒಂದು ವಾರಗಳಿಂದ ಆನೆಗಳ ಹಿಂಡು ನೆಲೆಸಿದೆ.

ಗ್ರಾಮದ ಕಾಫಿ ತೋಟದಲ್ಲಿ ತನ್ನ ಮರಿಗಳೊಂದಿಗಿರುವ ಆನೆಗಳು ಮತ್ತಷ್ಟು ಬೆಳೆ ಹಾನಿ ಮಾಡುವ ಸಂಭವ ಇದೆ ಎಂಬ ಆತಂಕವನ್ನು ಗ್ರಾಮಸ್ಥರು ಹೊರಹಾಕಿದ್ದಾರೆ.

ಇನ್ನು ಗುಂಪಿನಲ್ಲಿದ್ದ ಆನೆಯೊಂದು ಮರಿ ಹಾಕಿದ್ದು, ಹಾಗಾಗಿ ಉಳಿದ ಆನೆಗಳು ಕಾಫಿ ತೋಟದಲ್ಲಿ ವಿಹರಿಸುತ್ತಿವೆ. ಅಲ್ಲದೇ ಹಗಲಿನಲ್ಲಿ ಆನೆಗಳು ಕಾಫಿತೋಟದಲ್ಲೇ ಗಡದ್ ಆಗಿ ನಿದ್ದೆ ಮಾಡುತ್ತಿರೋದು ಸ್ಥಳೀಯರ ಆತಂಕ ಹೆಚ್ಚಿಸಿದೆ. ಈ ಬಗ್ಗೆ  ಅರಣ್ಯ ಇಲಾಖೆಗೆ ದೂರು ನೀಡಿದರೆ ಯಾವುದೇ ಪ್ರಯೋಜನವಾಗುತ್ತಿಲ್ಲ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

- Advertisement -

Latest News

error: Content is protected !!