Saturday, June 6, 2026
Homeತಾಜಾ ಸುದ್ದಿಬಹುನಿರೀಕ್ಷೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು: ಸೆಪ್ಟೆಂಬರ್‌ 30ಕ್ಕೆ

ಬಹುನಿರೀಕ್ಷೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು: ಸೆಪ್ಟೆಂಬರ್‌ 30ಕ್ಕೆ

- Advertisement -
- Advertisement -

ಲಖನೌ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಾದ ಮತ್ತು ಪ್ರತಿವಾದ ಸೆಪ್ಟೆಂಬರ್‌ 1ರಂದು ಮುಗಿದಿದ್ದು, ವಿಶೇಷ ನ್ಯಾಯಾಧೀಶರು ತೀರ್ಪು ಬರೆಯುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎಂದು ಸಿಬಿಐ ಪರ ವಕೀಲ ಲಲಿತ್‌ ಸಿಂಗ್‌ ತಿಳಿಸಿದ್ದಾರೆ.ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯ ಸೆಪ್ಟೆಂಬರ್‌ 30ರಂದು ತೀರ್ಪು ನೀಡಲಿದೆ.

ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ, ಎಂ.ಎಂ. ಜೋಶಿ, ಕಲ್ಯಾಣ್‌ ಸಿಂಗ್‌, ಉಮಾ ಭಾರತಿ , ವಿನಯ್‌ ಕಟಿಯಾರ್‌ ಸೇರಿದಂತೆ 32 ಆರೋಪಿಗಳು ಪ್ರಕರಣದಲ್ಲಿದ್ದು 351 ಸಾಕ್ಷಿದಾರರನ್ನು ಹಾಗೂ 600 ದಾಖಲಾತಿ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಸಿಬಿಐ ಹಾಜರುಪಡಿಸಿದೆ.ತೀರ್ಪು ನೀಡುವ ದಿನ ಎಲ್ಲ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ನ್ಯಾಯಾಧೀಶ ಎಸ್‌.ಕೆ. ಯಾದವ್‌ ಸೂಚಿಸಿದ್ದಾರೆ.

- Advertisement -

Latest News

error: Content is protected !!