Thursday, June 4, 2026
Homeಕೊಡಗುಕೊಡಗು: ಚಲಿಸುತ್ತಿದ್ದ ಜೀಪ್ ಮೇಲೆ ಬಿದ್ದ ವಿದ್ಯುತ್ ಕಂಬ: ಜೀಪ್ ಗೆ ಸುತ್ತಿಕೊಂಡ ವಿದ್ಯುತ್ ತಂತಿಗಳು

ಕೊಡಗು: ಚಲಿಸುತ್ತಿದ್ದ ಜೀಪ್ ಮೇಲೆ ಬಿದ್ದ ವಿದ್ಯುತ್ ಕಂಬ: ಜೀಪ್ ಗೆ ಸುತ್ತಿಕೊಂಡ ವಿದ್ಯುತ್ ತಂತಿಗಳು

- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ‌ ಮಳೆಯಿಂದಾಗಿ ಅವಘಡ ಸಂಭವಿಸಿದ್ದು, ಚಲಿಸುತ್ತಿದ್ದ ಜೀಪ್ ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದಿದೆ.

ಕಂಬ ಬಿದ್ದಾಗ ವಿದ್ಯುತ್ ತಂತಿಗಳು ಜೀಪ್ ಗೆ ಸುತ್ತಿಕೊಂಡಿವೆ.

ಪೊನ್ನಂಪೇಟೆ ತಾಲ್ಲೂಕಿನ ತೂಚುಮಕೇರಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ‌.

ಆದರೆ ಅದೃಷ್ಟವಶಾತ್ ತಂತಿಯಲ್ಲಿ ವಿದ್ಯುತ್ ಪ್ರವಹಿಸದೇ ಇದ್ದ ಕಾರಣ ಭಾರೀ ಅನಾಹುತ ತಪ್ಪಿ ಹೋಗಿದೆ.

ಜೀಪ್ ಚಲಾಯಿಸುತ್ತಿದ್ದ ಜೀವನ್ ಎಂಬಾತ ಅಪಾಯದಿಂದ‌ ಪಾರಾಗಿದ್ದು, ಮರ ಬಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಕಂಬ ತುಂಡಾಗಿ ಜೀಪ್ ನ ಮೇಲೆ ಬಿದ್ದಿದೆ.

- Advertisement -

Latest News

error: Content is protected !!