Thursday, April 25, 2024
Homeತಾಜಾ ಸುದ್ದಿಕೇರಳ ಸೇರಿ 5 ರಾಜ್ಯಗಳ ಚುನಾವಣೆಗೆ ಮುಹೂರ್ತ ಫಿಕ್ಸ್: ಇಲ್ಲಿದೆ ಸಂಪೂರ್ಣ ಮಾಹಿತಿ

ಕೇರಳ ಸೇರಿ 5 ರಾಜ್ಯಗಳ ಚುನಾವಣೆಗೆ ಮುಹೂರ್ತ ಫಿಕ್ಸ್: ಇಲ್ಲಿದೆ ಸಂಪೂರ್ಣ ಮಾಹಿತಿ

spot_img
- Advertisement -
- Advertisement -

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ತಮಿಳುನಾಡು, ಕೇರಳ, ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದ್ದು ಮೇ 2ರಂದು ಫಲಿತಾಂಶ ಹೊರಬೀಳಲಿದೆ.

ಅಸ್ಸಾಂ ನಲ್ಲಿ 126, ತಮಿಳುನಾಡುವಿನಲ್ಲಿ 234, ಪಶ್ಚಿಮ ಬಂಗಾಳದಲ್ಲಿ 294, ಕೇರಳದಲ್ಲಿ 140 ಪುದುಚೇರಿಯಲ್ಲಿ 30 ಸ್ಥಾನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಅಸ್ಸಾಂ:
ಒಟ್ಟು 3 ಹಂತಗಳಲ್ಲಿ ಮತದಾನ ನಡೆಯಲಿದೆ
ಮೊದಲ ಹಂತ: ಮಾರ್ಚ್ 27ಕ್ಕೆ ಮತದಾನ​, 47 ಕ್ಷೇತ್ರ
ಎರಡನೇ ಹಂತ: ಏಪ್ರಿಲ್​ 1ಕ್ಕೆ ಮತದಾನ,​ 39 ಕ್ಷೆತ್ರ
ಮೂರನೇ ಹಂತ: ಏಪ್ರಿಲ್ 6ಕ್ಕೆ ಮತದಾನ, 40 ಕ್ಷೇತ್ರ
ಮೇ 2ಕ್ಕೆ ಫಲಿತಾಂಶ

ಕೇರಳ:
ಎಲ್ಲಾ 140 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ
ಏಪ್ರಿಲ್​ 6ಕ್ಕೆ ಮತದಾನ
ಮೇ 2ಕ್ಕೆ ಫಲಿತಾಂಶ

ತಮಿಳುನಾಡು:
ಎಲ್ಲಾ 234 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ
ಏಪ್ರಿಲ್ 6ಕ್ಕೆ ಮತದಾನ
ಮೇ 2ಕ್ಕೆ ಫಲಿತಾಂಶ

ಪುದುಚೆರಿ:
ಎಲ್ಲಾ 30 ಕ್ಷೇತ್ರಗಳಿಗೂ ಒಂದು ಹಂತದಲ್ಲಿ ಮತದಾನ
ಏಪ್ರಿಲ್ 6ಕ್ಕೆ ಮತದಾನ
ಮೇ 2ಕ್ಕೆ ಫಲಿತಾಂಶ

ಪಶ್ಚಿಮ ಬಂಗಾಳ:
8 ಹಂತದಲ್ಲಿ ಮತದಾನ ನಡೆಯಲಿದೆ
ಮೊದಲ ಹಂತ: ಮಾರ್ಚ್ 27ಕ್ಕೆ ಮತದಾನ, 30 ಕ್ಷೇತ್ರ
ಎರಡನೇ ಹಂತ: ಏಪ್ರಿಲ್ 1ಕ್ಕೆ ಮತದಾನ, 30 ಕ್ಷೇತ್ರ
ಮೂರನೇ ಹಂತ: ಏಪ್ರಿಲ್ 6ಕ್ಕೆ ಮತದಾನ, 31 ಕ್ಷೇತ್ರ
ನಾಲ್ಕನೇ ಹಂತ: ಏಪ್ರಿಲ್​ 10ಕ್ಕೆ ಮತದಾನ, 44 ಕ್ಷೇತ್ರ
ಐದನೇ ಹಂತ: ಏಪ್ರಿಲ್​ 17ಕ್ಕೆ ಮತದಾನ, 45 ಕ್ಷೇತ್ರ
ಆರನೇ ಹಂತ: ಏಪ್ರಿಲ್​ 22ಕ್ಕೆ ಮತದಾನ, 43 ಕ್ಷೇತ್ರ
ಏಳನೇ ಹಂತ: ಏಪ್ರಿಲ್​ 26ಕ್ಕೆ ಮತದಾನ, 36 ಕ್ಷೇತ್ರ
ಎಂಟನೇ ಹಂತ: ಏಪ್ರಿಲ್​ 29ಕ್ಕೆ ಮತದಾನ, 35 ಕ್ಷೇತ್ರ
ಮೇ 2ಕ್ಕೆ ಫಲಿತಾಂಶ

ಒಟ್ಟಾರೆ 824 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು 18.68 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ಕೇಂದ್ರಾಡಳಿತ ಪ್ರದೇಶ ಪುದುಚೇರಿ ಮತ್ತು ನಾಲ್ಕು ರಾಜ್ಯಗಳ ಚುನಾವಣೆಗಾಗಿ 2.7 ಲಕ್ಷ ಮತ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಚುನಾವಣಾ ಆಯೋಗ ಮುಖ್ಯಸ್ಥ ಸುನೀಲ್ ಅರೋರಾ ಹೇಳಿದ್ದಾರೆ.

- Advertisement -
spot_img

Latest News

error: Content is protected !!