Saturday, June 6, 2026
Homeಕರಾವಳಿಕಾಸರಗೋಡುಮಂಜೇಶ್ವರ ; ತಮ್ಮನನ್ನೇ ಇರಿದು ಕೊಂದ ಅಣ್ಣ

ಮಂಜೇಶ್ವರ ; ತಮ್ಮನನ್ನೇ ಇರಿದು ಕೊಂದ ಅಣ್ಣ

- Advertisement -
- Advertisement -

ಮಂಜೇಶ್ವರ ; ತಮ್ಮನನ್ನು ಅಣ್ಣನೇ ಇರಿದು ಕೊಂದ ಘಟನೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಪೈವಳಿಕೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಪೈವಳಿಕೆ ಕಳಾಯಿ ನಿವಾಸಿ ಪ್ರಭಾಕರ ನೋಂಡಾ (40) ಕೊಲೆಗೀಡಾದವರು. ಅಣ್ಣ ಜಯರಾಮ ನೋಂಡಾ ಕೊಲೆ ಮಾಡಿದ್ದಾರೆ.

ಸಹೋದರರ ನಡುವಿನ ವೈಷಮ್ಯವೇ ಕೊಲೆಗೆ ಕಾರಣ ಎಂದು ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ. ಪ್ರಭಾಕರ  ವಿರುದ್ಧ ಹಲವು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ

- Advertisement -

Latest News

error: Content is protected !!