- Advertisement -
- Advertisement -
ಉಡುಪಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನ್ಯಾಷನಲ್ ಕನ್ ಸ್ಟ್ರಕ್ಷನ್ ಮಾಲೀಕನ ನಿವಾಸದ ಮೇಲಿನ ಇಡಿ ದಾಳಿ ಸಂಬಂಧವಾಗಿ ಕಾರ್ಕಳ ತಾಲೂಕಿನಲ್ಲಿ ಕೂಡಾ ದಾಳಿ ನಡೆದಿದೆ.
ನ್ಯಾಷನಲ್ ಕನ್ ಸ್ಟ್ರಕ್ಷನ್ ಗೆ ಮೆಟೀರಿಯಲ್ಸ್ ಸರಬರಾಜು ಮಾಡುತ್ತಿದ್ದ ಮಹಾಗಣಪತಿ ಕನ್ ಸ್ಟ್ರಕ್ಷನ್ ಮಾಲಕ ದಿನೇಶ್ ಶೆಟ್ಟಿ ಮನೆ ಮತ್ತು ಕಚೇರಿಯ ಮೇಲೆ ಕೂಡಾ ಇಡಿ ದಾಳಿ ನಡೆದಿದೆ.
ನಿಟ್ಟೆ ಗ್ರಾಮದ ಗುಂಡ್ಯಡ್ಕದ ಮಹಾಗಣಪತಿ ಕನ್ ಸ್ಟ್ರಕ್ಷನ್ ಮಾಲಕ ದಿನೇಶ್ ಶೆಟ್ಟಿ ಮನೆ ಮತ್ತು ಕಚೇರಿ ಮೇಲೆ ಇಂದು ದಾಳಿ ನಡೆದಿದೆ.
ಪರ್ಕಳ ಮತ್ತು ಹೆಬ್ರಿ 169ಎ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಸುತ್ತಿದ್ದ ನ್ಯಾಷನಲ್ ಕನ್ ಸ್ಟ್ರಕ್ಷನ್ ಮೇಲೆ ಇಂದು ಬೆಳಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು.
ಎರಡು ಇನ್ನೋವಾ ಕಾರಿನಲ್ಲಿ ಬಂದಿದ್ದ 12 ಜನ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆದಿದೆ.
- Advertisement -