Thursday, June 4, 2026
Homeಕರಾವಳಿದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಮತ್ತೆ ಕಂಪಿಸಿದ ಭೂಮಿ

ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಮತ್ತೆ ಕಂಪಿಸಿದ ಭೂಮಿ

- Advertisement -
- Advertisement -

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾಗಿರುವ ಮಡಿಕೇರಿ ತಾಲೂಕಿನ ಚೆಂಬು, ಸಂಪಾಜೆ ಮತ್ತು ಪೆರಾಜೆ ಗ್ರಾಮಗಳಲ್ಲಿ ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ.ಇಂದು ಬೆಳಗ್ಗೆ 7.45 ರ ಹೊತ್ತಿಗೆ ಕೆಲವು ಸೆಕೆಂಡ್ ಗಳ ಕಾಲ ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.

ಮೂರು ದಿನಗಳ ಹಿಂದೆ ಶನಿವಾರ ಕೂಡಾ ಬೆಳಗ್ಗೆ ಭೂಮಿ‌ಯಿಂದ ಶಬ್ದ ಕೇಳಿ ಬಂದಿತ್ತಲ್ಲದೇ ಕೆಲವು ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿತ್ತು. ಇಂದು ಮತ್ತೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಭೂಮಿ ಕಂಪಿಸಿದೆ.

ಭಾಗಮಂಡಲ, ಕರಿಕೆ, ಕರ್ಣಂಗೇರಿ ಗ್ರಾಮಗಳಲ್ಲಿ ಕೂಡಾ ಭೂಮಿ‌ ಕಂಪಿಸಿದೆ.‌ ಮಡಿಕೇರಿ ನಗರದಲ್ಲಿ ಕೂಡಾ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ.

- Advertisement -

Latest News

error: Content is protected !!