Saturday, December 14, 2024
Homeಇತರಲಾಕ್ ಡೌನ್ ನಡುವೆ ಮತ್ತಿನಲ್ಲಿದ್ದ ಯುವತಿಯರು ರಸ್ತೆಯಲ್ಲೇ ಮಾಡಿದ್ದೇನು ಗೊತ್ತಾ.?

ಲಾಕ್ ಡೌನ್ ನಡುವೆ ಮತ್ತಿನಲ್ಲಿದ್ದ ಯುವತಿಯರು ರಸ್ತೆಯಲ್ಲೇ ಮಾಡಿದ್ದೇನು ಗೊತ್ತಾ.?

spot_img
- Advertisement -
- Advertisement -

ಬೆಂಗಳೂರು: ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಯುವತಿಯರು ಮತ್ತಿನಲ್ಲಿ ಪೊಲೀಸರ ಮೇಲೆಯೇ ಕಾರ್ ಹತ್ತಿಸಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಲೀಲಾ ಪ್ಯಾಲೇಸ್ ಚೆಕ್ ಪೋಸ್ಟ್ ಬಳಿ ಪೊಲೀಸರು ವಾಹನಗಳ ತಪಾಸಣೆ ನಡೆಸಿದ್ದು, ನಿಯಮ ಉಲ್ಲಂಘಿಸಿ ರಸ್ತೆಗಳಿದ ಕಾರ್ ತಡೆದು ಪರಿಶೀಲಿಸಿದ್ದಾರೆ. ಮೊದಲೇ ಮದ್ಯ ಸೇವಿಸಿದ್ದ ಕಾರ್ ನಲ್ಲಿದ್ದ ಯುವತಿಯರು ಪೊಲೀಸರೊಂದಿಗೆ ಜಗಳವಾಡಿದ್ದಾರೆ.

ಕಾರ್ ನಿಂದ ಇಳಿದು ರಂಪಾಟ ಮಾಡಿದ್ದು, ತಮ್ಮ ಬಳಿ ಪಾಸ್ ಇದೆ. ಮೇಲಾಧಿಕಾರಿಗಳು ಗೊತ್ತು ಎಂದು ಹೇಳಿದ್ದು, ಕಾರ್ ತಡೆಯಲು ಬಂದ ಪೊಲೀಸರ ಮೇಲೆಯೇ ಹತ್ತಿಸಲು ಯತ್ನಿಸಿ ಪರಾರಿಯಾಗಿದ್ದಾರೆ. ಒಂದು ಕಿಲೋ ಮೀಟರ್ ವರೆಗೂ ಪೊಲೀಸರು ಚೇಸ್ ಮಾಡಿದ್ದು, ನಂತರ ಕಣ್ತಪ್ಪಿಸಿ ಯುವತಿಯರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಲಾಕ್ ಡೌನ್ ನಿಂದಾಗಿ ಖಾಲಿ ಇರುವ ರಸ್ತೆಯಲ್ಲಿ ಯುವತಿಯರು ಮದ್ಯಸೇವಿಸಿ ಪುಂಡಾಟಿಕೆ ತೋರಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!