Thursday, July 18, 2024
Homeಕರಾವಳಿಮಗನ ಮದುವೆಗೆ ಸಹಕರಿಸಿದ ಸಿಎಂ ಯಡಿಯೂರಪ್ಪ: ಹಾಡಿಹೊಗಳಿದ HDK

ಮಗನ ಮದುವೆಗೆ ಸಹಕರಿಸಿದ ಸಿಎಂ ಯಡಿಯೂರಪ್ಪ: ಹಾಡಿಹೊಗಳಿದ HDK

spot_img
- Advertisement -
- Advertisement -

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಮದುವೆಯಲ್ಲಿ ನಿಯಮ ಪಾಲನೆಯಾಗಿಲ್ಲ ಎಂದು ಆರೋಪಗಳು ಕೇಳಿಬಂದಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ನಿಯಮ ಪಾಲಿಸಿ ಸರಳವಾಗಿ ಮದುವೆ ನೆರವೇರಿದೆ ಎಂದು ಸ್ಪಷ್ಟನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಯಡಿಯೂರಪ್ಪನವರಿಗೆ ಧನ್ಯವಾದ ಹೇಳಿದ್ದಾರೆ.

ನಿಖಿಲ್ ವಿವಾಹದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರೂ ನಿಯಮ ಪಾಲಿಸಿದರೂ ಇದ್ಯಾವುದು ಪಾಲನೆಯಾಗಿಲ್ಲ ಎಂಬ ಚರ್ಚೆಗಳು ನಡೆದು ರಾಜಕೀಯ ದ್ವೇಷಕ್ಕಾಗಿ ಶುಭ ಸಮಾರಂಭದ ವಿಷಯದಲ್ಲಿ ವಿಷಕಾರುವ ಮನಸ್ಥಿತಿಗಳು ರಾರಾಜಿಸಿದವು. ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇವೆಲ್ಲವನ್ನೂ ನಿರಾಕರಿಸುವ ಮೂಲಕ ಸತ್ಯದ ಪರ ನಿಂತಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯ ರಾಜಕಾರಣದ ದೊಡ್ಡ ಕುಟುಂಬ ಸರಳವಾಗಿ ಮದುವೆ ಸಮಾರಂಭ ಮಾಡಿದೆ ಎಂದು ಯಡಿಯೂರಪ್ಪ ಸಹೃದಯದ ಮಾತುಗಳನ್ನಾಡಿರುವುದು ಅವರಿಗೆ ಮನದಾಳದ ಧನ್ಯವಾದಗಳು. ನನ್ನ ಒಡನಾಡಿಗಳು, ಹಿತೈಷಿಗಳು, ಜನ, ಕಾರ್ಯಕರ್ತರು ಎಲ್ಲರನ್ನು ಶುಭ ಸಮಾರಂಭವೊಂದರಲ್ಲಿ ಒಟ್ಟಿಗೆ ಸೇರಿಸಲು ವೈಯಕ್ತಿಕವಾಗಿ ನನಗೆ ಇದ್ದ ಒಂದೇ ಒಂದು ಸುವರ್ಣ ಅವಕಾಶವನ್ನು ಕೈಚೆಲ್ಲಿ ನಿಖಿಲ್ ಮದುವೆಯನ್ನು ಸರಳವಾಗಿ ಮಾಡಲಾಯಿತು ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!