- Advertisement -
- Advertisement -
ಬೆಳ್ತಂಗಡಿ : ಕೆಲದಿನಗಳ ಹಿಂದೆ ತಾಲೂಕಿನ ಕಾಶಿಪಟ್ಣ ಗ್ರಾಮದಲ್ಲಿ ನಡೆದ ಕಳ್ಳ ಭಟ್ಟಿ ತಯಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಅಬಕಾರಿ ಪೋಲೀಸರಿಂದ ಶುಕ್ರವಾರ ಬಂದಿಸಲ್ಪಟ್ಟಿದ್ದ ಕಾಶಿಪಟ್ಣದ ನೆತ್ತರಪಲ್ಕೆ ನಿವಾಸಿ ಎಲಿಯಾಸ್ ಕುವೆಲ್ಲೋಗೆ ಮದ್ಯಂತರ ಜಾಮೀನು ದೊರಕಿದೆ.
ಆರೋಪಿಯನ್ನು ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾದೀಶ ಸತೀಶ ಕೆ.ಜಿಯವರ ಮುಂದೆ ಹಾಜರು ಮಾಡಲಾಗಿತ್ತು. ನ್ಯಾಯಾದೀಶರು ಆರೋಪಿಗೆ ಮದ್ಯಂತರ ಜಾಮೀನು ನೀಡಿ ಆದೇಶಿಸಿದ್ದಾರೆ.
ಆರೋಪಿ ಪರವಾಗಿ ಬೆಳ್ತಂಗಡಿಯ ನ್ಯಾಯವಾದಿಗಳಾದ ಮನೋಹರ ಕುಮಾರ್ ಮತ್ತು ಆನಂದ ಕುಮಾರ್ ವಾದಿಸಿದ್ದರು.
- Advertisement -