- Advertisement -
- Advertisement -
ಚಿಕ್ಕಮಗಳೂರು: ಚಿಕ್ಕಮಗಳೂರಿನ ಮೂಡಿಗೆರೆ ಪಟ್ಟಣದ ಮುಖ್ಯರಸ್ತೆಯಲ್ಲಿ ಮಹಿಳೆಯೊಬ್ಬಳು ಮದ್ಯದ ಬಾಟಲಿಯನ್ನು ತಲೆ ಮೇಲೆ ಹೊತ್ತು ಡಾನ್ಸ್ ಮಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಡಿದಾಡುತ್ತಿದೆ.
ಸಾಮಾನ್ಯವಾಗಿ ಗಂಡಸರು ಮದ್ಯ ಸೇವಿಸಿ ಎಲ್ಲೆಂದರಲ್ಲಿ ಬಿದ್ದು ಹೊರಳಾಡುವುದನ್ನು ಕಾಣುತ್ತೇವೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ಪುರುಷರಿಗಿಂತ ತಾವೇನು ಕಮ್ಮಿ ಇಲ್ಲ ಅನ್ನುವ ಮಟ್ಟಿಗೆ ಮದ್ಯ ಸೇವಿಸುವ ದೃಶ್ಯಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ.
ಆದರೆ ಇಲ್ಲಿ ಕೊಂಚ ವಿಭಿನ್ನವೆಂಬಂತೆ, ಸೀರೆಯುಟ್ಟ ಮಹಿಳೆಯೊಬ್ಬಳು ನಡುರಸ್ತೆಯಲ್ಲಿ ಬಿಯರ್ ಬಾಟಲಿ ಹೊತ್ತುಕೊಂಡು, ಕೈಗಳ ಸಹಾಯವಿಲ್ಲದೆ ಕುಣಿದು ಕುಪ್ಪಳಿಸಿದ್ದಾಳೆ. ದಾರಿಯಲ್ಲಿ ಸಾಗುವ ಪ್ರಯಾಣಿಕರು ನೋಡುತ್ತಿದ್ದರು ಅದನ್ನ ಲೆಕ್ಕಿಸದ ಮಹಿಳೆ ತನ್ನದೇ ಲೋಕದಲ್ಲಿ ಮುಳುಗಿ ನೃತ್ಯ ಮಾಡಿದ್ದಾಳೆ.
- Advertisement -
