Thursday, June 4, 2026
Homeಅಪರಾಧಮಾದಕ ವಸ್ತು ಸೇವನೆ; ಆರೋಪಿಯ ಬಂಧನ

ಮಾದಕ ವಸ್ತು ಸೇವನೆ; ಆರೋಪಿಯ ಬಂಧನ

- Advertisement -
- Advertisement -

ಉಡುಪಿ: ಇಲ್ಲಿನ ನಿವಾಸಿಯೊಬ್ಬನನ್ನು ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಜುಲೈ 10ರಂದು ಉಡುಪಿಯಲ್ಲಿ ಬಂಧಿಸಲಾಗಿದೆ.

ಇಕ್ಬಾಲ್ ಶೇಕ್ (34) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಆರೋಪಿ ಇಕ್ಬಾಲ್ ಉಡುಪಿಯ ಕೊಳಂಬೆ ಮಿಷನ್ ಕಂಪೌಂಡ್ ನಿವಾಸಿ ಶಬೀರ್ ಅಹಮ್ಮದ್ ಎಂಬವರ ಪುತ್ರನಾಗಿದ್ದು, ಈತ ಉಡುಪಿಯ ಶಿವಳ್ಳಿ ಗ್ರಾಮದ ಕಾಯಿನ್ ಸರ್ಕಲ್ ಬಳಿ ಜುಲೈ 10 ರಂದು ಕರ್ತವ್ಯದ ವೇಳೆ ಸಬ್ ಇನ್ಸ್‌ಪೆಕ್ಟರ್ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಇಕ್ಬಾಲ್ ಪಾನಮತ್ತನಾಗಿದ್ದನ್ನು ಪತ್ತೆ ಹಚ್ಚಿದ್ದರು.

ಪೊಲೀಸ್ ಅಧಿಕಾರಿಗಳು ಇಕ್ಬಾಲ್ ಡ್ರಗ್ಸ್ ಸೇವಿಸುತ್ತಿರುವ ಬಗ್ಗೆ ಅನುಮಾನಗೊಂಡ ಆತನನ್ನು ಮಣಿಪಾಲ ಕೆಎಂಸಿ ಫೋರೆನ್ಸಿಕ್ ಮೆಡಿಸಿನ್ ವಿಭಾಗಕ್ಕೆ ಕರೆತಂದು ಪರೀಕ್ಷೆಗೆ ಒಳಪಡಿಸಿದ್ದರು. ಜುಲೈ 13ರಂದು ಆತ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿತ್ತು. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!