Wednesday, May 15, 2024
HomeWorldಸೌದಿ ವಿಮಾನ ನಿಲ್ದಾಣದ ಮೇಲೆ ಡ್ರೋಣ್ ದಾಳಿ; 8 ಮಂದಿಗೆ ಗಾಯ!

ಸೌದಿ ವಿಮಾನ ನಿಲ್ದಾಣದ ಮೇಲೆ ಡ್ರೋಣ್ ದಾಳಿ; 8 ಮಂದಿಗೆ ಗಾಯ!

spot_img
- Advertisement -
- Advertisement -

ದುಬೈ: ಸೌದಿ ಅರೇಬಿಯಾ ಏರ್​​ಪೋರ್ಟ್​ ಮೇಲೆ ಮಂಗಳವಾರ ಡ್ರೋಣ್​​​ ದಾಳಿ ನಡೆಸಲಾಗಿದ್ದು,​ ದಾಳಿಯಿಂದ ಎಂಟು ಜನ ಸಾರ್ವಜನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಈ ಹಿಂದೆಯೇ ಸೌದಿ ಅರೇಬಿಯಾದ ಅಭಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಡ್ರೋನ್​ ದಾಳಿ ನಡೆಸಲಾಗಿತ್ತು.ಈಗ ಎರಡನೇ ಬಾರಿಗೆ ಈ ಏರ್​​​ಪೋರ್ಟ್​ ಗುರಿಯಾಗಿಸಿ ಡ್ರೋನ್​​ ದಾಳಿ ಮಾಡಲಾಗಿದೆ. ಈ ಡ್ರೋನ್​ ದಾಳಿಯಲ್ಲಿ 8 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅದೃಷ್ಟವಶಾತ್​​​ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ದಾಳಿಗೆ ತಕ್ಷಣಕ್ಕೆ ಯಾವುದೇ ಸಂಘಟನೆಗಳು ಹೊಣೆ ಹೊತ್ತಿಲ್ಲ. 24 ಗಂಟೆಗಳಲ್ಲಿ ಸಂಭವಿಸುತ್ತಿರುವ ಇಂತಹ ಎರಡನೇ ದಾಳಿ ಇದಾಗಿದೆ.

ಈ ಹಿಂದಿನ ದಾಳಿಯಲ್ಲಿ ಸಾವು-ನೋವುಗಳು ಸಂಭವಿಸಿರಲಿಲ್ಲ. ಸೌದಿ ನೇತೃತ್ವದ ಮಿಲಿಟರಿ ಪಡೆ ಇರಾನ್ ಬೆಂಬಲಿತ ಶಿಯಾ ಬಂಡಾಯದವರ ವಿರುದ್ಧ ಯೆಮೆನ್ ನಲ್ಲಿ ಯುದ್ಧದಲ್ಲಿ ಕೈ ಜೋಡಿಸಿದೆ. ತಕ್ಷಣಕ್ಕೆ ಸರ್ಕಾರದಿಂದ ಡ್ರೋನ್ ದಾಳಿ ಬಗ್ಗೆ ಯಾವುದೇ ಪ್ರತಿಕ್ರಿಯೆಯೂ ದೊರೆತಿಲ್ಲ.

ಇನ್ನು, ಡ್ರೋನ್​​ ದಾಳಿ ಬಗ್ಗೆ ಸೌದಿ ಅರೇಬಿಯಾ ಏರ್​​ಪೋರ್ಟ್​ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಯಾರು ಡ್ರೋನ್​ ದಾಳಿ ನಡೆಸಿದ್ದಾರೆ ಎಂದು ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!