Monday, May 20, 2024
Homeತಾಜಾ ಸುದ್ದಿಸುಪ್ರೀಂ ಕೋರ್ಟ್ ಮಹಿಳಾ ನ್ಯಾಯಮೂರ್ತಿಯಾಗಿ ಕನ್ನಡತಿ ಬಿ.ವಿ ನಾಗರತ್ನ ಪ್ರಮಾಣವಚನ ಸ್ವೀಕಾರ!

ಸುಪ್ರೀಂ ಕೋರ್ಟ್ ಮಹಿಳಾ ನ್ಯಾಯಮೂರ್ತಿಯಾಗಿ ಕನ್ನಡತಿ ಬಿ.ವಿ ನಾಗರತ್ನ ಪ್ರಮಾಣವಚನ ಸ್ವೀಕಾರ!

spot_img
- Advertisement -
- Advertisement -

ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದ ಕನ್ನಡತಿ ಜಸ್ಟೀಸ್ ನಾಗರತ್ನ ಬಿ. ವಿ ಸೇರಿದಂತೆ ದೇಶದ 9 ನ್ಯಾಯಾಮೂರ್ತಿಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಇಂದು, ಮಂಗಳವಾರ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕರ್ನಾಟಕದ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ, ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನಿಸಿಕೊಂಡಿದ್ದಾರೆ.ದೆಹಲಿಯ ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಿಜೆಐ ಎನ್.ವಿ. ರಮಣ ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಬೋಧಿಸಿದರು.

ಸುಪ್ರಿಂಕೋರ್ಟ್‌ ಇತಿಹಾಸದಲ್ಲೇ ಮೊದಲ ಬಾರಿ 9 ಜನ ನ್ಯಾಯಾಧೀಶರು ಒಂದೇ ದಿನ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು ಕರ್ನಾಟಕದ ಜಸ್ಟೀಸ್ ನಾಗರತ್ನ ಬಿ. ವಿ ಜೊತೆ ಜ| ಎ.ಎಸ್. ಓಕಾ, ಜ| ವಿಕ್ರಮ್ ನಾಥ್, ಜ| ಜೆ.ಕೆ. ಮಹೇಶ್ವರಿ, ಜ| ಹಿಮಾ ಕೊಹ್ಲಿ, ಜ| ಸಿ.ಟಿ. ರವೀಂದ್ರಕುಮಾರ್, ಜ| ಎಂ.ಎಂ. ಸುಂದರೇಶ್, ಜ| ಬೇಲಾ ತ್ರಿವೇದಿ ಮತ್ತು ಜ| ಪಿ.ಎಸ್. ನರಸಿಂಹ ಪ್ರಮಾಣವಚನ ಸ್ವೀಕರಿಸಿದ್ದಾರೆ.

ದೇಶದ ಮಾಜಿ ಮುಖ್ಯ ನ್ಯಾಯಮೂರ್ತಿ, ಕನ್ನಡಿಗ ಇ.ಎಸ್‌.ವೆಂಕಟರಾಮಯ್ಯ ಅವರ ಪುತ್ರಿಯಾಗಿರುವ ನ್ಯಾ| ನಾಗರತ್ನ 1962ರಲ್ಲಿ ಜನಿಸಿದ್ದಾರೆ. 1987ರಲ್ಲಿ ವಕೀಲೆಯಾಗಿ ನ್ಯಾಯಾಂಗ ವೃತ್ತಿ ಆರಂಭಿಸಿದ ಅವರು ಸಂವಿಧಾನ, ವಾಣಿಜ್ಯ, ವಿಮೆ ಮತ್ತು ಸೇವಾ ಕ್ಷೇತ್ರಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಪರಿಣತಿ ಪಡೆದಿದ್ದಾರೆ. 2008ರಲ್ಲಿ ಅವರು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ, 2020ರಲ್ಲಿ ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.

- Advertisement -
spot_img

Latest News

error: Content is protected !!