Saturday, June 6, 2026
Homeತಾಜಾ ಸುದ್ದಿಸೋಡಿಯಂ ಕೆಮಿಕಲ್ ಬಳಸಿ ಸ್ಫೋಟ ಪ್ರಕರಣ; ಡ್ರೋಣ್ ಪ್ರತಾಪ್ ಗೆ 10 ದಿನಗಳ ಕಾಲ ನ್ಯಾಯಾಂಗ...

ಸೋಡಿಯಂ ಕೆಮಿಕಲ್ ಬಳಸಿ ಸ್ಫೋಟ ಪ್ರಕರಣ; ಡ್ರೋಣ್ ಪ್ರತಾಪ್ ಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನ

- Advertisement -
- Advertisement -

ತುಮಕೂರು; ಸೋಡಿಯಂ ಕೆಮಿಕಲ್ ಬಳಸಿ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡ್ರೋಣ್ ಪ್ರತಾಪ್ ಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಮಧುಗಿರಿ ಕೋರ್ಟ್ ಇಂದು ಆದೇಶ ನೀಡಿದೆ.

ಡಿಸೆಂಬರ್ 26ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಮಧುಗಿರಿಯ ಜೆಎಂಎಫ್ ಸಿ ನ್ಯಾಯಾಲಯದಿಂದ ಆದೇಶಿಸಿದೆ. ಇಂದು ಮಧುಗಿರಿಯ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಮಿಡಿಗೇಶಿ ಪೊಲೀಸರು ಡ್ರೋಣ್ ಪ್ರತಾಪ್ ಅವರನ್ನು ಹಾಜರುಪಡಿಸಿದ್ದರು. ವಾದ ಆಲಿಸಿ 10 ದಿನಗಳ ಕಾಲ ಡ್ರೋಣ್ ಪ್ರತಾಪ್ ಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಡ್ರೋನ್ ಪ್ರತಾಪ್ ಸ್ಫೋಟಿಸಿದ್ದರು. ಬಳಿಕ ಸ್ಫೋಟಗೊಳ್ಳುವ ವಿಡಿಯೋವನ್ನು ಡ್ರೋಣ್ ಪ್ರತಾಪ್ ಸಾಮಾಜಿಕ ಜಾಲತಾಣದಲ್ಲಿ, ಅಪ್ಲೋಡ್ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪ್ರತಾಪ್ ಅಲ್ಲದೇ, ಜಮೀನಿನ ಮಾಲೀಕ ಜಿತೇಂದ್ರ ಜೈನ್ ಮತ್ತು ಇತರರ ವಿರುದ್ಧ ಬಿಎನ್ಎಸ್ ಕಾಯ್ದೆ ಸೆಕ್ಷನ್ 176, ಸಿಆರ್ಪಿಸಿ 158ಎ ಮತ್ತು ಬಿ ಹಾಗೂ ಸ್ಫೋಟಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಮಧುಗಿರಿಯ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!