ಬೆಳ್ತಂಗಡಿ: ಕುಕ್ಕೇಡಿ ದೇವಾಡಿಗರ ಸಮುದಾಯದ ಭವನದಲ್ಲಿ ಡಿ.15 ರಂದು ನಡೆದ ದೇವಾಡಿಗರ ಸೇವಾ ವೇದಿಕೆ (ರಿ) ವೇಣೂರು ವಲಯ ಇವರ ಆಶ್ರಯದಲ್ಲಿ ನಡೆದ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಖಾಯಂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯಾದ ತಾರಕೇಸರಿ, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ಅನಿತಾ, ದೇವಾಡಿಗ ಸಂಘದ ಅಧ್ಯಕ್ಷ ಸುರೇಶ್ ಮೊಯ್ಲಿ, ಗೌರವಾಧ್ಯಕ್ಷರಾದ ಸುಂದರ ದೇವಾಡಿಗ, ಉಪಾಧ್ಯಕ್ಷರಾದ ದಯಾನಂದ ದೇವಾಡಿಗ, ಕಾರ್ಯದರ್ಶಿಯಾದ ಗಣೇಶ್ ದೇವಾಡಿಗ, ಮಹಿಳಾ ವೇದಿಕೆ ಅಧ್ಯಕ್ಷ ಸುಮತಿ.ಪಿ.ಎನ್ , ಹಾಗೂ ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರು.ಮಹಿಳಾ ವೇದಿಕಯ ಸರ್ವ ಸದಸ್ಯರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ನಾಟಿ ವೈದ್ಯರಾದ ಸಂಜೀವ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು.