Sunday, June 7, 2026
Homeಕರಾವಳಿಪುತ್ತೂರು : ಸಾಲ ವಾಪಾಸ್ಸು ಕೇಳಿದ ಲಾರಿ ಕ್ಲೀನರ್ ನನ್ನು ಅರ್ಧದಾರಿಯಲ್ಲೇ ಬಿಟ್ಟು ಹೋದ ಚಾಲಕ...

ಪುತ್ತೂರು : ಸಾಲ ವಾಪಾಸ್ಸು ಕೇಳಿದ ಲಾರಿ ಕ್ಲೀನರ್ ನನ್ನು ಅರ್ಧದಾರಿಯಲ್ಲೇ ಬಿಟ್ಟು ಹೋದ ಚಾಲಕ !

- Advertisement -
- Advertisement -

ಪುತ್ತೂರು : ಲಾರಿ ಕ್ಲೀನರ್  ಸಾಲವಾಗಿ ಕೊಟ್ಟಿದ್ದ ಹಣವನ್ನು ವಾಪಾಸು ಕೇಳಿದನೆಂಬ ಕಾರಣಕ್ಕೆ ಆತನನ್ನು ಚಾಲಕ ಅರ್ಧ ದಾರಿಯಲ್ಲೇ ಬಿಟ್ಟು ಹೋದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಗೌರಿಬಿದನೂರಿನ ಸತೀಶ್ ಅರ್ಧ ದಾರಿಯಲ್ಲಿ ಬಾಕಿಯಾದ ವ್ಯಕ್ತಿ. ಬೆಂಗಳೂರಿನಿಂದ ಕ್ಯಾಪ್ಸಿಕಂ ಮೆಣಸನ್ನು ತುಂಬಿಕೊಂಡು ಬಂದಿದ್ದ ಲಾರಿ ವಿಟ್ಲ ತಲುಪುತ್ತಿದ್ದಂತೆಯೇ ಸಾಲವಾಗಿ ನೀಡಿದ್ದ 8 ಸಾವಿರ ಹಣವನ್ನು ವಾಪಾಸು ಕೊಡುವಂತೆ ಕ್ಲೀನರ್ ಚಾಲಕನಿಗೆ ಕೇಳಿದ್ದ. ಇದರಿಂದ ಸಿಟ್ಟಿಗೆದ್ದ ಚಾಲಕ ಆತನಿಗೆ ಬೈದು ಆತನಲ್ಲಿದ್ದ ಮೊಬೈಲ್ ಹಾಗೂ ಪರ್ಸ್ ನ್ನು ಕಿತ್ತು ಅರ್ಧ ದಾರಿಯಲ್ಲೇ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ. ನಂತರ ಕ್ಲೀನರ್ ವಿಟ್ಲದಿಂದ ನಡೆದುಕೊಂಡು ಸವಣೂರು ತಲುಪಿದ್ದು, ಈ ವೇಳೆ ಬೈಕ್ ನಲ್ಲಿ ತೆರಳುತ್ತಿದ್ದ ಪುತ್ತೂರಿನಲ್ಲಿ ಉದ್ಯೋಗಿಯಾಗಿರುವ ಬೆಳ್ತಂಗಡಿ ಯುವಕನ ಜೊತೆ ಡ್ರಾಪ್ ಕೇಳಿದ್ದು, ನಡೆದ ವಿಚಾರವನ್ನೆಲ್ಲ ವಿವರಿಸಿದ್ದಾನೆ. ಕೊನೆಗೆ ಯುವಕ ಆತನಿಗೆ 800ರೂ. ನೀಡಿ ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!