Thursday, September 10, 2026
Homeಅಪರಾಧಗಂಡನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ಬಿಗ್ ಬಾಸ್ ಖ್ಯಾತಿಯ ಚೈತ್ರ ಕೊಟ್ಟೂರು!

ಗಂಡನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ಬಿಗ್ ಬಾಸ್ ಖ್ಯಾತಿಯ ಚೈತ್ರ ಕೊಟ್ಟೂರು!

- Advertisement -
- Advertisement -

ಬೆಂಗಳೂರು : ಗಂಡನ ವಿರುದ್ಧ ಬಿಗ್ ಬಾಸ್ ಖ್ಯಾತಿಯ ನಟಿ ಚೈತ್ರಾ ಕೊಟ್ಟೂರ್,ಅತ್ಯಾಚಾರದ ದೂರು ದಾಖಲಿಸಿದ್ದು,ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ನಟಿ ದೂರು ನೀಡಿದ್ದಾರೆ.

ತಮ್ಮ ಪತಿ ನಾಗಾರ್ಜುನ ವಿರುದ್ಧ ಮದುವೆಗೂ ಮುನ್ನ ಅತ್ಯಾಚಾರ ಎಸಗಿದ ಆರೋಪ ಮಾಡಿದ್ದು ಜೊತೆಗೆ ಮದುವೆ ಬಳಿಕ ವರದಕ್ಷಿಣೆಗೆ ಕಿರುಕುಳ ನೀಡಿದ್ದಾರೆ ಎಂದೂ ಆರೋಪಿಸಿದ್ದಾರೆ. ಪತಿ ಸಂಬಂಧಿಕರು, ಪೋಷಕರ ವಿರುದ್ಧ ಹಲ್ಲೆ, ನಿಂದನೆ, ಕೊಲೆ ಬೆದರಿಕೆ ಆರೋಪವನ್ನೂ ಮಾಡಲಾಗಿದೆ.

ಚೈತ್ರರವರು ನೀಡಿರುವ ದೂರಿನ ಪ್ರಕಾರ, ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಪರಿಚಯವಾಗಿದ್ದು, ಬಳಿಕ ಗ್ರಾಮೀಣ ಪ್ರತಿಭೆ ಬೆಳೆಯಬೇಕೆಂದು ಆತ ಹತ್ತಿರವಾಗಿದ್ದ. ಒಂದು ದಿನ ಏಕಾಏಕಿ ಭೇಟಿ ಮಾಡುವುದಕ್ಕೆಂದು ಕರೆದಿದ್ದು, ಮನೆಗೆ ಹೋದಾಗ ಅತ್ಯಾಚಾರವೆಸಗಲಾಗಿದೆ. ಮನೆಯಲ್ಲಿ ಅಳುತ್ತಿದ್ದಾಗ ಮದುವೆ ಮಾಡಿಕೊಳ್ಳುವ ಭರವಸೆ ನೀಡಿ, ಮದುವೆಯಾದ್ರೆ ಸರಿಯಾಗುತ್ತೆ ಎಂದು ಆರೋಪಿ ಪತಿ ಹೇಳಿದ್ದ. ಇದಾದ ಬಳಿಕ ಹಲವು ಬಾರಿ ಇದೇ ರೀತಿ ಬೇಡವೆಂದು ಹೇಳಿದರೂ ಕೇಳದೆ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇಷ್ಟಾಗಿ ಹಲವು ದಿನಗಳ ಬಳಿಕ ಮದುವೆಯಾಗುವಂತೆ ಹೇಳಿದಾಗ ನಿಧಾನವಾಗಿ ದೂರವಾಗಲು ಆರೋಪಿ ಯತ್ನಿಸಿದ್ದಾನೆ. ಗಲಾಟೆ ಮಾಡಿದಾಗ ಮದುವೆಗೆ ನಿರಾಕರಣೆ ಮಾಡಿದ್ದ. ಗೆಳೆಯನ ಜತೆ ದೇಗುಲದಲ್ಲಿ ಮಾತುಕತೆ ವೇಳೆ ತಾಳಿ ಕಟ್ಟಿದ್ದ. ಬಳಿಕ ಅವರ ಮನೆಗೆ ಹೋದಾಗ ಮದುವೆ ಆಗಿಲ್ಲ, ಬಲವಂತವಾಗಿ ತಾಳಿ ಕಟ್ಟಿಸಿದ್ದರೆಂದು ಆರೋಪಿ ಪತಿ ಹೇಳಿದ್ದ. ಇದೇ ವಿಚಾರವಾಗಿ ಗಲಾಟೆ ಹಿನ್ನೆಲೆ ದೂರು ದಾಖಲಿಸಿದ್ದೆ. ಅವರ ಮನೆಯಲ್ಲಿ ವರದಕ್ಷಿಣೆ ತರುವಂತೆ ಒತ್ತಾಯಿಸಿದ್ದರು. ನನ್ನ ಜಾತಿಯನ್ನು ನಿಂದಿಸಿದ್ದರು. ತನ್ನ ಗೌರವಕ್ಕೆ ಧಕ್ಕೆ ಆಗುವಂತೆ ಮಾತಾಡಿದ್ದರು. ಆರೋಪಿ ಪತಿ ತಂದೆ ಕೊಲೆ ಮಾಡಿ ರೈಲ್ವೆ ಹಳಿ ಮೇಲೆ ಹಾಕುವುದಾಗಿ ಬೆದರಿಸಿದ್ದ. ಈ ಎಲ್ಲಾ ಪ್ರಕರಣಗಳನ್ನು ಉಲ್ಲೇಖಿಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಸಂತ್ರಸ್ತೆ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

- Advertisement -

Latest News

error: Content is protected !!