Tuesday, April 30, 2024
Homeಕರಾವಳಿಡಾ| ರತ್ನಾಕರ ಮಲ್ಲಮೂಲೆ ಕಣ್ಣೂರು ವಿ.ವಿ. ಸೆನೆಟ್‌ ಸದಸ್ಯ

ಡಾ| ರತ್ನಾಕರ ಮಲ್ಲಮೂಲೆ ಕಣ್ಣೂರು ವಿ.ವಿ. ಸೆನೆಟ್‌ ಸದಸ್ಯ

spot_img
- Advertisement -
- Advertisement -

ಕಾಸರಗೋಡು: ಕಣ್ಣೂರು ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ತನ್ನ ಸೆನೆಟ್‌ ಸಮಿತಿಗೆ ಕನ್ನಡಿಗರನ್ನು ಸದಸ್ಯರನ್ನಾಗಿ ಪರಿಗಣಿಸಿದೆ. ಡಾ| ರತ್ನಾಕರ ಸೇರಿದಂತೆ ಒಟ್ಟು 19 ಮಂದಿಯನ್ನು ನಾಮ ನಿರ್ದೇಶನ ಮಾಡಲಾಗಿದೆ. 

ವಿ.ವಿ. ಕುಲಪತಿಯೂ ಆಗಿರುವ ರಾಜ್ಯಪಾಲ ಆರಿಫ್ ಮಹಮ್ಮದ್‌ ಖಾನ್‌ ಅವರು ಭಾಷಾ ಅಲ್ಪಸಂಖ್ಯಾತ ಕ್ಷೇತ್ರದ ಪ್ರತಿನಿಧಿಯಾಗಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ| ರತ್ನಾಕರ ಮಲ್ಲಮೂಲೆ ಅವರನ್ನು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ. 

ಕಣ್ಣೂರು ವಿ.ವಿ. ರಚನೆಯಾದ ಬಳಿಕ ಸೆನೆಟ್‌ನಲ್ಲಿ ಕನ್ನಡಿರಿಗೆ ಮೊದಲ ಬಾರಿ ಸ್ಥಾನ ಸಿಕ್ಕಿದೆ. ಈ ಹಿಂದೆ ಕಲ್ಲಿಕೋಟೆ ವಿ.ವಿ.ಯ ಸೆನೆಟ್‌ನಲ್ಲಿ ಕನ್ನಡಿಗರಿಗೆ ಸ್ಥಾನವಿತ್ತು. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 3 ಬಾರಿ ಸಂಸದರಾಗಿದ್ದ ಕನ್ನಡಿಗರಾಮಣ್ಣ ರೈ ಕಲ್ಲಿಕೋಟೆ ವಿ.ವಿ.ಯ ಸೆನೆಟ್‌ ಸದಸ್ಯರಾಗಿ ಭಾಷಾ ಅಲ್ಪಸಂಖ್ಯಾ ಕರ ಪ್ರತಿನಿಧಿಯಾಗಿದ್ದರು. ಸುದೀರ್ಘ‌ 28 ವರ್ಷಗಳ ಬಳಿಕ ಮೊದಲ ಬಾರಿಗೆ ಕಣ್ಣೂರು ವಿ.ವಿ. ಕನ್ನಡಿಗರೊಬ್ಬನನ್ನು ಸೆನೆಟ್‌ಗೆ ಆಯ್ಕೆ ಮಾಡಿದೆ.

- Advertisement -
spot_img

Latest News

error: Content is protected !!