Wednesday, April 24, 2024
Homeಕರಾವಳಿಕಾಸರಗೋಡುನೆದರ್  ಲ್ಯಾಂಡ್ ನಲ್ಲಿ ದೋಸೆ ಹಿಟ್ಟು ತಯಾರಿಕೆಯಲ್ಲೇ ಯಶಸ್ಸು ಕಂಡ ಕೇರಳದ ದಂಪತಿ; ನೂರಾರು ಮಂದಿಗೆ...

ನೆದರ್  ಲ್ಯಾಂಡ್ ನಲ್ಲಿ ದೋಸೆ ಹಿಟ್ಟು ತಯಾರಿಕೆಯಲ್ಲೇ ಯಶಸ್ಸು ಕಂಡ ಕೇರಳದ ದಂಪತಿ; ನೂರಾರು ಮಂದಿಗೆ ಉದ್ಯೋಗ ನೀಡಿ ಮಾದರಿಯಾದ ಜೋಡಿ

spot_img
- Advertisement -
- Advertisement -

ಕೇರಳ; ದೇವರನಾಡಿನ ದಂಪತಿ ಇದೀಗ ನೆದರ್​ಲ್ಯಾಂಡ್ಸ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಅದು ಕೂಡ ದೋಸೆ ವಿಚಾರಕ್ಕೆ. ಏನಪ್ಪಾ.. ಇದು ಕಥೆ ಅಂತೀರಾ ನಾವು ಹೇಳ್ತೀವಿ ಕೇಳಿ..

ಕೇರಳದ ಎಂಜಿನಿಯರ್ ದಂಪತಿಯಾದ ರಮ್ಯಾ ಮತ್ತು ನವೀನ್​ 11 ವರ್ಷಗಳ ಹಿಂದೆ ನೆದರ್​ಲ್ಯಾಂಡ್ಸ್​ಗೆ ಉದ್ಯೋಗಕ್ಕಾಗಿ ತೆರಳಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಅಲ್ಲಿನ ಆಹಾರ ಪದ್ಧತಿಯೇ ಬಹು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಇಡ್ಲಿ, ದೋಸೆ ಪ್ರಿಯರಾದ ಅವರಿಗೆ ಬೇಕೂ ಅಂದ್ರು ಅವು ತಿನ್ನೋದಕ್ಕೆ ಸಿಗುತ್ತಿರಲಿಲ್ಲ. ಹಾಗಾಗಿ ನಾವೇ ಇದನ್ನು ಯಾಕೆ ಉದ್ಯಮವನ್ನಾಗಿ ಆರಂಭಿಸಬಾರದು ಎಂದು ಯೋಚಿಸಿದ ದಂಪತಿ  ಅದರಂತೆ “ಮದರ್ಸ್​ ಕಿಚನ್​” ಎಂಬ ಸಣ್ಣ ಕಂಪನಿ ಆರಂಭಿಸಿದರು. ಆರಂಭದಲ್ಲಿ 10 ಕೆಜಿ ದೋಸೆ ಹಿಟ್ಟನ್ನು ರುಬ್ಬಿ ಅಲ್ಲಿನ ಹೋಟೆಲ್​ಗಳಿಗೆ ನೀಡುತ್ತಿದ್ದರು.‌ಆ ಬಳಿಕ‌ ದೋಸೆ ಇಟ್ಟಿಗೆ ಭಾರೀ‌ ಬೇಡಿಕೆ‌ ಬಂದಿದ್ದು,ಇದೀಗ 500 ಕೆಜಿ ಹಿಟ್ಟು ರುಬ್ಬಿ ಸೂಪರ್​ ಮಾರ್ಕೆಟ್​ಗಳಿಗೂ ಅದನ್ನು ಮಾರಾಟ ಮಾಡುತ್ತಿದ್ದಾರೆ.

ರುಬ್ಬಿದ ಹಿಟ್ಟಿಗಾಗಿ ಹೆಚ್ಚಿನ ಪ್ರಮಾಣದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ದೊಡ್ಡ ಯಂತ್ರಗಳನ್ನು ಖರೀದಿಸಿದ್ದಾರೆ.ಇದೀಗ ಲಕ್ಷಾಂತರ ರೂ.‌ಸಂಪಾದನೆಯನ್ನು ಮಾಡುತ್ತಿದ್ದಾರೆ. ಎಂಜಿನಿಯರ್​ ಆಗಿದ್ದ ರಮ್ಯಾ ಮತ್ತು ನವೀನ್​ ಅವರು ಈಗ ಕೆಲಸ ಬಿಟ್ಟು ಹಿಟ್ಟು ಉದ್ಯಮದಲ್ಲೆ ಯಶಸ್ಸು ಕಂಡಿದ್ದು, ಲಕ್ಷಾಂತರ ರೂ.‌ಲಾಭ ಗಳಿಸುತ್ತಿದ್ದಾರೆ‌.

- Advertisement -
spot_img

Latest News

error: Content is protected !!