Wednesday, June 3, 2026
Homeತಾಜಾ ಸುದ್ದಿಕಲಾವಿದರನ್ನ ಹೀಗೆ ಅಪಮಾನ ಮಾಡದಿರಿ: ಕಹಿ ಘಟನೆ ಮರೆತು ದರ್ಶನ್‌ ಬೆಂಬಲಕ್ಕೆ ನಿಂತ ನಟ ಜಗ್ಗೇಶ್‌

ಕಲಾವಿದರನ್ನ ಹೀಗೆ ಅಪಮಾನ ಮಾಡದಿರಿ: ಕಹಿ ಘಟನೆ ಮರೆತು ದರ್ಶನ್‌ ಬೆಂಬಲಕ್ಕೆ ನಿಂತ ನಟ ಜಗ್ಗೇಶ್‌

- Advertisement -
- Advertisement -

ದರ್ಶನ್‌ ಮೇಲೆ ಚಪ್ಪಲಿ ಎಸೆದ ಘಟನೆ ಖಂಡಿಸಿ ಟ್ವೀಟ್‌ ಮಾಡಿದ ನಟ ಜಗ್ಗೇಶ್ ಈ ಘಟನೆ ತಪ್ಪು ಹಾಗೂ ಖಂಡನೀಯ. ದಯವಿಟ್ಟು ಕಲಾವಿದರನ್ನ ಹೀಗೆ ಅಪಮಾನ ಮಾಡದಿರಿ ಎಂದು ಹೇಳಿದ್ದಾರೆ.

ಕಲಾವಿದರಿಗೆ ಗೊತ್ತಿರುವುದು ಕಲಾಪ್ರೇಮಿಗಳ ಸಂತೋಷ ಪಡಿಸುವ ಕಾಯಕ ಮಾತ್ರ. ಎಲ್ಲಾ ಕಲಾವಿದರು ಶಾರದೆಯ ಮಕ್ಕಳು. ಅವರ ಮೇಲೆ ಪ್ರೀತಿ ಇರಲಿ ದ್ವೇಷ ಬೇಡ ನನ್ನ ವಿನಂತಿ. ದರ್ಶನ ಸ್ವಲ್ಪ ನೇರನುಡಿ ಮನಸ್ಸು ಮಗುವಂತೆ ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.

ತಮ್ಮೊಂದಿಗೆ ನಡೆದ ಕಹಿ ಘಟನೆಯನ್ನು ಮರೆತು ಜಗ್ಗೇಶ್, ದರ್ಶನ್‌ಗೆ ಬೆಂಬಲ ನೀಡಿರುವುದು ಪ್ರಶಂಸೆಗೆ ಪಾತ್ರವಾಗಿದೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಇದೆ ದರ್ಶನ್‌ರ ಕೆಲವು ಅಭಿಮಾನಿಗಳು ಜಗ್ಗೇಶ್‌ ನಟಿಸುತ್ತಿದ್ದ ‘ತೋತಾಪುರಿ’ ಸಿನಿಮಾದ ಶೂಟಿಂಗ್‌ ಸೆಟ್‌ ಗೆ ತೆರಳಿ ಜಗ್ಗೇಶ್ ರನ್ನು ಸುತ್ತುವರೆದು ಬೈದಿದ್ದರು.

.

- Advertisement -

Latest News

error: Content is protected !!