Wednesday, June 3, 2026
Homeಕರಾವಳಿಮಂಗಳೂರುಬೆಳ್ತಂಗಡಿ :ಉಜಿರೆಯ ಕಿರಣ್ ಅಗ್ರೋಟೆಕ್ ನಿಂದ ಸೇವಾಭಾರತಿಗೆ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್) ಯಂತ್ರದ ಕೊಡುಗೆ

ಬೆಳ್ತಂಗಡಿ :ಉಜಿರೆಯ ಕಿರಣ್ ಅಗ್ರೋಟೆಕ್ ನಿಂದ ಸೇವಾಭಾರತಿಗೆ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್) ಯಂತ್ರದ ಕೊಡುಗೆ

- Advertisement -
- Advertisement -

ಬೆಳ್ತಂಗಡಿ : ಕಿರಣ್ ಅಗ್ರೋಟೆಕ್ ನ ಮಾಲಿಕರಾದ ಶ್ರೀ ಪ್ರಕಾಶ್ ಬಿ.ಕೆ ಇವರು ಜುಲೈ 20 ರಂದು ಸೇವಾಭಾರತಿ ಕನ್ಯಾಡಿಯ ಕಚೇರಿಗೆ ಭೇಟಿ ನೀಡಿ, ಸೊಳ್ಳೆಯನ್ನು ಮುಕ್ತಮಾಡುವ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್ ) ಯಂತ್ರವನ್ನು ಸೇವಾಧಾಮಕ್ಕೆ ಕೊಡುಗೆಯಾಗಿ ನೀಡಿದರು.

ಇವರು ಸೇವಾಭಾರತಿ/ ಸೇವಾಧಾಮದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ,ಈ ಹಿಂದಿನಂತೆ ಮುಂದೆಯೂ ಸೇವಾಕಾರ್ಯಗಳಿಗೆ ಕೈ ಜೋಡಿಸುತ್ತೇನೆ ಎಂದು ಹೇಳಿ ಯಂತ್ರವನ್ನು ಸೇವಾಭಾರತಿಯ ಸಲಹಾ ಸಮಿತಿ ಸದಸ್ಯರಾದ ಶ್ರೀ ರಜತ್ ರಾವ್ ಇವರಿಗೆ ಹಸ್ತಾಂತರಿಸಿದರು.

ಶ್ರೀ ರಜತ್ ರಾವ್ ಇದನ್ನು ಸ್ವೀಕರಿಸಿ ಫಲಾನುಭವಿಗಳು ಮತ್ತು ಸಂಸ್ಥೆಯ ಪರವಾಗಿ ಧನ್ಯವಾದವಿತ್ತರು ಹಾಗೂ ಈ ಸಂದರ್ಭದಲ್ಲಿ ಸೇವಾಭಾರತಿಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.ಉಜಿರೆಯಲ್ಲಿ ಮುಖ್ಯ ಸೇವಾಕೇಂದ್ರವಿದ್ದು ಈ ವರ್ಷದಿಂದ ಕೊಕ್ಕಡದಲ್ಲೂ ಸೇವಾವಿಭಾಗ ಹೊಂದುವ ಮೂಲಕ ಕಿರಣ್ ಆಗ್ರೋ ಟೆಕ್ ಕೃಷಿಕರ ಅಶೋತ್ತರಗಳಿಗೆ ಶ್ರಮಿಸುವಲ್ಲಿ ಸಾಫಲ್ಯ ಕಂಡಿದೆ.

- Advertisement -

Latest News

error: Content is protected !!