Friday, June 5, 2026
Homeಉತ್ತರ ಕನ್ನಡಶಿರೂರಿನಲ್ಲಿ ಗುಡ್ಡ ಕುಸಿತ ಪ್ರಕರಣ; ತನ್ನ ಯಜಮಾನನ ಕುಟುಂಬಕ್ಕಾಗಿ ರೋಧಿಸುತ್ತಿದೆ ಶ್ವಾನ

ಶಿರೂರಿನಲ್ಲಿ ಗುಡ್ಡ ಕುಸಿತ ಪ್ರಕರಣ; ತನ್ನ ಯಜಮಾನನ ಕುಟುಂಬಕ್ಕಾಗಿ ರೋಧಿಸುತ್ತಿದೆ ಶ್ವಾನ

- Advertisement -
- Advertisement -

ಉತ್ತರಕನ್ನಡ; ಇಂದು ಅಂಕೋಲಾದ ಶಿರೂರು ಎಂಬಲ್ಲಿ ಹೆದ್ದಾರಿ ಗುಡ್ಡ ಕುಸಿದ ಪರಿಣಾಮ 7 ಜನ ಸಾವನ್ನಪ್ಪಿದ್ದಾರೆ. ಕುಸಿತದಿಂದ ಮನೆ,ಅಂಗಡಿ ಮಣ್ಣಿನಡಿ ಸಿಲುಕಿದ್ದು ಮನೆಯಲ್ಲಿದ್ದವರೆಲ್ಲರೂ ಮೃತರಾಗಿದ್ದಾರೆ ಎನ್ನಲಾಗುತ್ತಿದೆ. ಇನ್ನು ಅಂಗಡಿಯಲ್ಲಿ ಚಹಾ,ತಿಂಡಿ ಮಾರಿ ಜೀವನ ಮಾಡುತ್ತಿದ್ದ ಲಕ್ಷ್ಮಣ ನಾಯ್ಕ ಮತ್ತು ಕುಟುಂಬದ ನಾಲ್ವರು ಕುಸಿತದಿಂದ ಕಣ್ಮರೆಯಾಗಿದ್ದಾರೆ ಬದುಕಿರುವ ಸಾಧ್ಯತೆ ವಿರಳ ಎನ್ನಲಾಗುತ್ತಿದೆ.

ಅಂಗಡಿ ಬಳಿ ಇರುತ್ತಿದ್ದ ಅವರ ಸಾಕು ನಾಯಿ ಅಪಾಯದಿಂದ ಪಾರಾಗಿದೆ. ಸಾಕಿದ ಒಡೆಯ, ಮನೆಯವರು ಮಣ್ಣಿನಡಿ ಸಿಲುಕಿರುವುದು ಅದಕ್ಕೆ ಖಾತ್ರಿಯಾಗಿದೆ. ಜಡಿ ಮಳೆ ಬರುತ್ತಿದ್ದರೂ ಶ್ವಾನ ಅಲ್ಲಿಂದ ಕದಲದೇ ಮಣ್ಣಿನ ರಾಶಿಯಲ್ಲಿ ಹುಡುಕುತ್ತಾ ರೋಧಿಸುತ್ತಾ ಸುತ್ತು ಬರುತ್ತಿದೆ. ನಾಯಿಯ ರೋಧನೆ ನೆರೆದ ಜನರ ಮನಕಲಕುವಂತಿದೆ. ಇದಕ್ಕೆ ಅಲ್ವಾ ಹೇಳೋದು ನಿಯತ್ತಿಗೆ ಇನ್ನೊಂದು ಹೆಸರು ನಾಯಿ ಅಂತಾ.

- Advertisement -

Latest News

error: Content is protected !!