- Advertisement -
![]()
- Advertisement -
ಕೊಡಗು; ನಿಯಂತ್ರಣ ಕಳೆದುಕೊಂಡು ಬೈಕ್ ಲಾರಿಗೆ ಡಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಸಮೀಪದ ಕೊಡಗರಹಳ್ಳಿ ಮಾರುತಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೊದಲು ಲಾರಿಗೆ ಡಿಕ್ಕಿ ಹೊಡೆದಿರುವ ಬೈಕ್ ನಂತರ ರಸ್ತೆ ಬದಿಯ ಮೋರಿಗೆ ಅಪ್ಪಳಿಸಿ ಈ ದುರಂತ ಸಂಭವಿಸಿದೆ. ಸುಂಟಿಕೊಪ್ಪ ಬಾಳೆಕಾಡು ತೋಟದ ನಿವಾಸಿ ಆಟೋ ಚಾಲಕ ನಾರಾಯಣ ಪೂಜಾರಿ ಅವರ ಮಗ ರಕ್ಷಿತ್ ಹಾಗೂ ಗರಗಂದೂರು ಗ್ರಾಮದ ಮಂಜು ಎಂಬುವವರು ಈ ಅಪಘಾತದಲ್ಲಿ ಮೃತಪಟ್ಟ ಯುವಕರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
- Advertisement -


