Friday, June 5, 2026
Homeಕರಾವಳಿಉಪ್ಪಿನಂಗಡಿಯಲ್ಲಿ ಹಲವರಿಗೆ ಹುಚ್ಚು ನಾಯಿ ಕಡಿತ

ಉಪ್ಪಿನಂಗಡಿಯಲ್ಲಿ ಹಲವರಿಗೆ ಹುಚ್ಚು ನಾಯಿ ಕಡಿತ

- Advertisement -
- Advertisement -

ಉಪ್ಪಿನಂಗಡಿ: ಹುಚ್ಚು ನಾಯಿಯೊಂದು ಹಲವರಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಉಪ್ಪಿನಂಗಡಿಯ ಪೆರಿಯಡ್ಕ ಸಮೀಪದ ನೆಡ್ಚಿಲ್‍ನಲ್ಲಿ ನಡೆದಿದೆ.

ವೃದ್ಧೆಯೋರ್ವರು ಸೇರಿದಂತೆ ನಿನ್ನೆ ಹಲವರಿಗೆ ಹುಚ್ಚು ನಾಯಿ ಕಚ್ಚಿದ್ದು ಅಲ್ಲದೇ, ಕೆಲವರ ಮನೆಯೊಳಗೂ ನುಗ್ಗಲು ಯತ್ನಿಸಿದೆ. ಇಲ್ಲಿನ ಜನತಾ ಕಾಲನಿಯಲ್ಲಿರುವ ಮನೆಯೊಂದರಲ್ಲಿ ಸಾಕಿದ ನಾಯಿ ಇದೆಂದು ಹೇಳಲಾಗುತ್ತಿದ್ದು, ಅವರು ಅದಕ್ಕೆ ಹುಚ್ಚಿಲ್ಲ. ರಿಕ್ಷಾ ಅಪಘಾತವಾಗಿ ಅದರ ತಲೆಗೆ ಪೆಟ್ಟಾಗಿತ್ತು. ಆದ್ದರಿಂದ ಅದು ಈ ರೀತಿ ಮಾಡುತ್ತಿದೆ ಎನ್ನುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.  ಆದರೆ ಸದ್ಯ ಹುಚ್ಚು ನಾಯಿ ಕಚ್ಚಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

- Advertisement -

Latest News

error: Content is protected !!