Wednesday, June 24, 2026
Homeಕರಾವಳಿಮಂಗಳೂರುಮಂಗಳೂರು; ವೈದ್ಯರ ಕೈಯಲ್ಲಿದ್ದ ಮೊಬೈಲ್ ಕದ್ದು ಪರಾರಿಯಾದ ಕಳ್ಳ

ಮಂಗಳೂರು; ವೈದ್ಯರ ಕೈಯಲ್ಲಿದ್ದ ಮೊಬೈಲ್ ಕದ್ದು ಪರಾರಿಯಾದ ಕಳ್ಳ

- Advertisement -
- Advertisement -

ಮಂಗಳೂರು; ವೈದ್ಯರ ಕೈಯಲ್ಲಿದ್ದ ಮೊಬೈಲ್ ನ್ನು ಕಳ್ಳನೊಬ್ಬ ಕದ್ದು ಪರಾರಿಯಾದ ಘಟನೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಬಳಿ ನಡೆದಿದೆ.

ಡಾ. ಸುಜೇಯ್ ವಿ.ಕೆ. ಎಂಬವರು ಮೇ 25ರಂದು ರಾತ್ರಿ ರೈಲ್ವೆ ನಿಲ್ದಾಣ ಸಮೀಪವಿರುವ ಟಿಟಿಇ ವಿಶ್ರಾಂತಿ ಗೃಹದ ಎದುರಿನ ರಸ್ತೆಯಲ್ಲಿ ನಿಂತು ರೈಲಿನಲ್ಲಿ ಬರುವ ಪತ್ನಿಗಾಗಿ ಕಾಯುತ್ತಿದ್ದರು.

ರಾತ್ರಿ 10:05ರಿಂದ 10:25ರ ನಡುವೆ ರೈಲ್ವೆ ನಿಲ್ದಾಣದ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದ ವ್ಯಕ್ತಿಯೋರ್ವ ಸುಜೇಯ್‌ರ ಕೈಯಲ್ಲಿದ್ದ ಮೊಬೈಲ್ ಸೆಟ್‌ನ್ನು ಕಸಿದುಕೊಂಡು ಮುತ್ತಪ್ಪ ಗುಡಿಯ ಕಡೆಗೆ ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ

- Advertisement -

Latest News

error: Content is protected !!