Saturday, June 6, 2026
Homeಕರಾವಳಿಪುತ್ತೂರು: ಒಂದೂವರೆ ತಿಂಗಳ ಮಗುವಿಗೆ ಅವಧಿ ಮೀರಿದ ಇಂಜೆಕ್ಷನ್ ನೀಡಿದ ವೈದ್ಯ; ಡಾಕ್ಟರ್ ವಿರುದ್ಧ ದೂರು...

ಪುತ್ತೂರು: ಒಂದೂವರೆ ತಿಂಗಳ ಮಗುವಿಗೆ ಅವಧಿ ಮೀರಿದ ಇಂಜೆಕ್ಷನ್ ನೀಡಿದ ವೈದ್ಯ; ಡಾಕ್ಟರ್ ವಿರುದ್ಧ ದೂರು ದಾಖಲಿಸಿದ ಮಗುವಿನ ತಂದೆ

- Advertisement -
- Advertisement -

ಪುತ್ತೂರು: ಒಂದೂವರೆ ತಿಂಗಳ ಹಸುಳೆಗೆ ಅವಧಿ ಮೀರಿದ ಇಂಜೆಕ್ಷನ್ ನೀಡಿದ್ದಾರೆ ಎಂದು ಮಗುವಿನ‌ ತಂದೆ ದೂರು ನೀಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ವಿಟ್ಲದ ಕನ್ಯಾನ ನಿವಾಸಿ ಜೀವನ್‌ ಪ್ರಕಾಶ್‌ ಡಿ’ಸೋಜಾ ಅವರು ಅ.24ರಂದು ತನ್ನ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಪುತ್ತೂರಿನ ಆಸ್ಪತ್ರೆಯೊಂದರಲ್ಲಿ ಚುಚ್ಚು ಮದ್ದು ಕೊಡಿಸಿದ್ದರು. ಆದರೆ ಚುಚ್ಚು ಮದ್ದಿನಲ್ಲಿ ಸ್ಟಿಕ್ಕರ್‌ ಅಂಟಿಸಲಾಗಿದ್ದು, ಅವಧಿ ಮೀರಿದ ದಿನಾಂಕ ಕಂಡು ಬಂದಿದೆ.

ಹಾಗಾಗಿ ಅವಧಿ ಮೀರಿದ ಚುಚ್ಚು ಮದ್ದು ನೀಡಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ‌ ಆಗ್ರಹಿಸಿ‌ ಮಗುವಿನ ತಂದೆ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!