Sunday, May 19, 2024
Homeಕರಾವಳಿಬೆಳ್ತಂಗಡಿ: ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಹುಳ ಮಿಶ್ರಿತ ಪೌಷ್ಟಿಕ ಆಹಾರ: ಬೆಳ್ತಂಗಡಿಯ ಮಾಜಿ ಶಾಸಕರ ತಂಡದಿಂದ...

ಬೆಳ್ತಂಗಡಿ: ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಹುಳ ಮಿಶ್ರಿತ ಪೌಷ್ಟಿಕ ಆಹಾರ: ಬೆಳ್ತಂಗಡಿಯ ಮಾಜಿ ಶಾಸಕರ ತಂಡದಿಂದ ಶಾಲೆಯ ಪರಿಶೀಲನೆ

spot_img
- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯ ಅವ್ಯವಸ್ಥೆ ಬಯಲಾಗಿದೆ. ನೋಡೋದಕ್ಕೆ ಅತ್ಯಾಧುನಿಕವಾಗಿರುವ ಕಟ್ಟಡದಲ್ಲಿ ಮಕ್ಕಳಿಗೆ ಸಿಗುವ ಆಹಾರ ಮಾತ್ರ ಮನುಷ್ಯರಾದವರಿಗೆ ತಿನ್ನೋದಕ್ಕೆ ಅಸಾಧ್ಯ ಎಂಬಂತಿದೆ.

ಈ ವಸತಿ ಶಾಲೆಯಲ್ಲಿ ಸುಮಾರು 230 ವಿದ್ಯಾರ್ಥಿಗಳಿದ್ದು, ಉತ್ತಮ ಶಿಕ್ಷಣವೂ ದೊರೆಯುತ್ತಿದೆ. ಮಾತ್ರವಲ್ಲದೆ 100 ಶೇಕಡಾ ಫಲಿತಾಂಶವನ್ನೂ ದಾಖಲಿಸಿದ ಕೀರ್ತಿಯನ್ನು ಈ ವಸತಿ ಶಾಲೆ ಹೊಂದಿದೆ. ಆದರೆ ಈ ವಿದ್ಯಾರ್ಥಿಗಳಿಗೆ ನೀಡುವ ಆಹಾರ ಮಾತ್ರ ದೇವರಿಗೇ ಪ್ರೀತಿ ಎಂಬಂತಿದೆ. ಇನ್ನು ಈ ಸಮಸ್ಯೆಯನ್ನು ನೀಗಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.  ಈ ಬಗ್ಗೆ ಮಾಹಿತಿ ಪಡೆದ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರರವರು ಅ. 21 ರಂದು ಮಾಧ್ಯಮದವರೊಂದಿಗೆ ಹಾಸ್ಟೆಲಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಹುಳಯುಕ್ತ ಆಹಾರ ಪದಾರ್ಥಗಳನ್ನು ನೋಡಿ ಪ್ರಭಾರ ಪ್ರಾಂಶುಪಾಲರಾದ ಕಾಶಿಪಟ್ಲ ನಿವಾಸಿಯಾದ ವಿದ್ಯಾಲತಾ ಅವರನ್ನು ಹಾಗೂ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳಪೆ ಆಹಾರಗಳನ್ನು ನೋಡಿ ಮಾಜಿ ಶಾಸಕರೇ ಅರೆಕ್ಷಣ ಶಾಕ್ ಆಗಿದ್ದಾರೆ. ಅಲ್ಲದೇ ಗುಣಮಟ್ಟದ ಆಹಾರ ನೀಡುವಂತೆ ಖಡಕ್ ವಾರ್ನ್ ಮಾಡಿದ್ದಾರೆ.

ಈ ಬಗ್ಗೆ ಮಾಜಿ ಶಾಸಕ ವಸಂತ ಬಂಗೇರರು ಮಾತನಾಡಿದ್ದು, ಇನ್ನು ಮುಂದಾದರೂ ತಪ್ಪನ್ನು ತಿದ್ದಿಕೊಂಡು ಮಕ್ಕಳಿಗೆ ಉತ್ತಮ ಆಹಾರವನ್ನು ನೀಡಲಿ ಎಂದರು.ವಸತಿ ಶಾಲೆಯ ಅವ್ಯವಸ್ಥೆಯ ಕುರಿತು ಅಲ್ಲಿನ ವಾರ್ಡನ್‌ರನ್ನು ಪ್ರಶ್ನಿಸಿದಾಗ ಅವರು ಹೇಳೋದೇ ಬೇರೆ, ನಮಗೆ ಇಲ್ಲಿಗೆ ದಿನಸಿ ತಂದು ಹಾಕುವ ಏಜೆನ್ಸಿಯವರು ಹಾಳಾದ ವಸ್ತುಗಳನ್ನು ಸರಬರಾಜು ಮಾಡುತ್ತಾರೆ, ಅದನ್ನು ಹಿಂದಿರುಗಿಸಿದರೂ ಅವರು ಕೊಂಡುಹೋಗುವುದಿಲ್ಲ. ಎಂದು ಅಸಹಾಯಕತೆಯನ್ನು ತೋಡಿಕೊಳ್ಳುತ್ತಾರೆ. ಜೊತೆಗೆ ಅಗತ್ಯ ಸಿಬ್ಬಂದಿ ಕೊರತೆ ಇದ್ದು, ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ.

ಈ ಬಗ್ಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹೇಮಚಂದ್ರರವರು ಇಲ್ಲಿನ ಸಮಸ್ಯೆಗಳನ್ನು ಮೇಲಾಧಿಕಾರಿಗಳಿಗೆ ವರದಿ ಮಾಡಿ ಸಮಸ್ಯೆ ಪರಿಹಾರಕ್ಕೆ ಕೇಳಿಕೊಳ್ಳುತ್ತೇನೆ ಎಂದರು.ಆಹಾರ ಸಾಮಾಗ್ರಿಗಳ ಪರಿಶೀಲನೆ ನಡೆಸುವ ವೇಳೆ ಸುಮಾರು 20ಕ್ಕೂ ಹೆಚ್ಚು ಗೋಣಿಗಳಲ್ಲಿ ಹಾಳಾದ ಗೋದಿ ಮತ್ತು ಅಕ್ಕಿಯನ್ನು ಪ್ರಾಂಶುಪಾಲರ ವಸತಿಗೃಹದಲ್ಲಿ ಸಂಗ್ರಹಿಸಿರುವುದೂ ಕಂಡುಬಂತು. ಅಷ್ಟುಮಾತ್ರವಲ್ಲದೆ ಇಲ್ಲಿನ ಸುಂದರವಾದ ಪರಿಸರದಲ್ಲಿ ಸುಂದರವಾದ ಹಾಸ್ಟೆಲ್ ನಿರ್ಮಾಣವಾಗಿದ್ದರೂ, ಅದರ ಗುತ್ತಿಗೆದಾರರು ಕಾಮಗಾರಿಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸದೆ, ಬಿಲ್ ಪಾಸ್ ಮಾಡಿಕೊಂಡಿರುವುದಾಗಿಯೂ ಮಾಜಿ ಶಾಸಕ ವಸಂತ ಬಂಗೇರರು ಆರೋಪಿಸಿದ್ದು, ಈ ಬಗ್ಗೆಯೂ ಸೂಕ್ತ ತನಿಖೆ ನಡೆಸಿ, ಸರಕಾರದ ಒಂದು ಉತ್ತಮ ಯೋಜನೆಯ ಲಾಭ ಮಕ್ಕಳಿಗೆ ಸಂಪೂರ್ಣವಾಗಿ ದೊರೆಯುವಂತಾಗಲಿ.

ಬೆಳ್ತಂಗಡಿ: ಇಲ್ಲಿನ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯ ಅವ್ಯವಸ್ಥೆ ಬಯಲಾಗಿದೆ. ನೋಡೋದಕ್ಕೆ ಅತ್ಯಾಧುನಿಕವಾಗಿರುವ ಕಟ್ಟಡದಲ್ಲಿ ಮಕ್ಕಳಿಗೆ ಸಿಗುವ ಆಹಾರ ಮಾತ್ರ ಮನುಷ್ಯರಾದವರಿಗೆ ತಿನ್ನೋದಕ್ಕೆ ಅಸಾಧ್ಯ ಎಂಬಂತಿದೆ.
ಈ ವಸತಿ ಶಾಲೆಯಲ್ಲಿ ಸುಮಾರು 230 ವಿದ್ಯಾರ್ಥಿಗಳಿದ್ದು, ಉತ್ತಮ ಶಿಕ್ಷಣವೂ ದೊರೆಯುತ್ತಿದೆ. ಮಾತ್ರವಲ್ಲದೆ 100 ಶೇಕಡಾ ಫಲಿತಾಂಶವನ್ನೂ ದಾಖಲಿಸಿದ ಕೀರ್ತಿಯನ್ನು ಈ ವಸತಿ ಶಾಲೆ ಹೊಂದಿದೆ. ಆದರೆ ಈ ವಿದ್ಯಾರ್ಥಿಗಳಿಗೆ ನೀಡುವ ಆಹಾರ ಮಾತ್ರ ದೇವರಿಗೇ ಪ್ರೀತಿ ಎಂಬಂತಿದೆ. ಇನ್ನು ಈ ಸಮಸ್ಯೆಯನ್ನು ನೀಗಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.  ಈ ಬಗ್ಗೆ ಮಾಹಿತಿ ಪಡೆದ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರರವರು ಅ. 21 ರಂದು ಮಾಧ್ಯಮದವರೊಂದಿಗೆ ಹಾಸ್ಟೆಲಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಹುಳಯುಕ್ತ ಆಹಾರ ಪದಾರ್ಥಗಳನ್ನು ನೋಡಿ ಪ್ರಭಾರ ಪ್ರಾಂಶುಪಾಲರಾದ ಕಾಶಿಪಟ್ಲ ನಿವಾಸಿಯಾದ ವಿದ್ಯಾಲತಾ ಅವರನ್ನು ಹಾಗೂ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳಪೆ ಆಹಾರಗಳನ್ನು ನೋಡಿ ಮಾಜಿ ಶಾಸಕರೇ ಅರೆಕ್ಷಣ ಶಾಕ್ ಆಗಿದ್ದಾರೆ. ಅಲ್ಲದೇ ಗುಣಮಟ್ಟದ ಆಹಾರ ನೀಡುವಂತೆ ಖಡಕ್ ವಾರ್ನ್ ಮಾಡಿದ್ದಾರೆ.

ಈ ಬಗ್ಗೆ ಮಾಜಿ ಶಾಸಕ ವಸಂತ ಬಂಗೇರರು ಮಾತನಾಡಿದ್ದು, ಇನ್ನು ಮುಂದಾದರೂ ತಪ್ಪನ್ನು ತಿದ್ದಿಕೊಂಡು ಮಕ್ಕಳಿಗೆ ಉತ್ತಮ ಆಹಾರವನ್ನು ನೀಡಲಿ ಎಂದರು.ವಸತಿ ಶಾಲೆಯ ಅವ್ಯವಸ್ಥೆಯ ಕುರಿತು ಅಲ್ಲಿನ ವಾರ್ಡನ್‌ರನ್ನು ಪ್ರಶ್ನಿಸಿದಾಗ ಅವರು ಹೇಳೋದೇ ಬೇರೆ, ನಮಗೆ ಇಲ್ಲಿಗೆ ದಿನಸಿ ತಂದು ಹಾಕುವ ಏಜೆನ್ಸಿಯವರು ಹಾಳಾದ ವಸ್ತುಗಳನ್ನು ಸರಬರಾಜು ಮಾಡುತ್ತಾರೆ, ಅದನ್ನು ಹಿಂದಿರುಗಿಸಿದರೂ ಅವರು ಕೊಂಡುಹೋಗುವುದಿಲ್ಲ. ಎಂದು ಅಸಹಾಯಕತೆಯನ್ನು ತೋಡಿಕೊಳ್ಳುತ್ತಾರೆ. ಜೊತೆಗೆ ಅಗತ್ಯ ಸಿಬ್ಬಂದಿಗಳ ಕೊರತೆ ಇದ್ದು, ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ.

ಈ ಬಗ್ಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹೇಮಚಂದ್ರರವರು ಇಲ್ಲಿನ ಸಮಸ್ಯೆಗಳನ್ನು ಮೇಲಾಧಿಕಾರಿಗಳಿಗೆ ವರದಿ ಮಾಡಿ ಸಮಸ್ಯೆ ಪರಿಹಾರಕ್ಕೆ ಕೇಳಿಕೊಳ್ಳುತ್ತೇನೆ ಎಂದರು.ಆಹಾರ ಸಾಮಾಗ್ರಿಗಳ ಪರಿಶೀಲನೆ ನಡೆಸುವ ವೇಳೆ ಸುಮಾರು 20ಕ್ಕೂ ಹೆಚ್ಚು ಗೋಣಿಗಳಲ್ಲಿ ಹಾಳಾದ ಗೋದಿ ಮತ್ತು ಅಕ್ಕಿಯನ್ನು ಪ್ರಾಂಶುಪಾಲರ ವಸತಿಗೃಹದಲ್ಲಿ ಸಂಗ್ರಹಿಸಿರುವುದೂ ಕಂಡುಬಂತು. ಅಷ್ಟುಮಾತ್ರವಲ್ಲದೆ ಇಲ್ಲಿನ ಸುಂದರವಾದ ಪರಿಸರದಲ್ಲಿ ಸುಂದರವಾದ ಹಾಸ್ಟೆಲ್ ನಿರ್ಮಾಣವಾಗಿದ್ದರೂ, ಅದರ ಗುತ್ತಿಗೆದಾರರು ಕಾಮಗಾರಿಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸದೆ, ಬಿಲ್ ಪಾಸ್ ಮಾಡಿಕೊಂಡಿರುವುದಾಗಿಯೂ ಮಾಜಿ ಶಾಸಕ ವಸಂತ ಬಂಗೇರರು ಆರೋಪಿಸಿದ್ದು, ಈ ಬಗ್ಗೆಯೂ ಸೂಕ್ತ ತನಿಖೆ ನಡೆಸಿ, ಸರಕಾರದ ಒಂದು ಉತ್ತಮ ಯೋಜನೆಯ ಲಾಭ ಮಕ್ಕಳಿಗೆ ಸಂಪೂರ್ಣವಾಗಿ ದೊರೆಯುವಂತಾಗಲಿ.

- Advertisement -
spot_img

Latest News

error: Content is protected !!