Saturday, June 6, 2026
Homeಚಿಕ್ಕಮಗಳೂರುಚಿಕ್ಕಮಗಳೂರು; ಕಂಠಪೂರ್ತಿ ಕುಡಿದು ಸಂತಾನಹರಣ ಆಪರೇಷನ್ ಗೆ ಬಂದ ವೈದ್ಯ; ಆಪರೇಷನ್ ಥಿಯೇಟರ್ ನಲ್ಲಿ...

ಚಿಕ್ಕಮಗಳೂರು; ಕಂಠಪೂರ್ತಿ ಕುಡಿದು ಸಂತಾನಹರಣ ಆಪರೇಷನ್ ಗೆ ಬಂದ ವೈದ್ಯ; ಆಪರೇಷನ್ ಥಿಯೇಟರ್ ನಲ್ಲಿ ಗಡದ್ ನಿದ್ದೆ; ಅನಸ್ತೇಶಿಯಾ ಪಡೆದ ಮಹಿಳೆಯರ ಪರದಾಟ

- Advertisement -
- Advertisement -

ಚಿಕ್ಕಮಗಳೂರು; ಕಂಠಪೂರ್ತಿ ಕುಡಿದು ಸಂತಾನಹರಣ ಆಪರೇಷನ್ ಗೆ ಬಂದ ವೈದ್ಯನೊಬ್ಬ ಆಪರೇಷನ್ ಥಿಯೇಟರ್ ಗಡದ್ ನಿದ್ದೆ ಜಾರಿ ಅನಸ್ತೇಶಿಯಾ ಪಡೆದ ಮಹಿಳೆಯರ ಪರದಾಡಿದ  ವೈದ್ಯ ವೃತ್ತಿಗೆ ಅವಮಾನ ಎಸಗುವಂತಹ ಘಟನೆ ಚಿಕ್ಕಮಗಳೂರಿನ ಕಳಸ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

 ಕಳಸ ಆಸ್ಪತ್ರೆ ವೈದ್ಯ ಬಾಲಕೃಷ್ಣ ನಿನ್ನೆ ರಾತ್ರಿ ಫುಲ್ ಟೈಟಾಗಿ ಸಂತಾನಹರಣ ಆಪರೇಷನ್ ಮಾಡಲು ಆಪರೇಷನ್ ಥಿಯೇಟರ್ ಗೆ ಬಂದಿದ್ದಾನೆ. ಹೀಗೆ ಬಂದವನು ಶಸ್ತ್ರಚಿಕಿತ್ಸೆಯ ವೇಳೆ ಫುಲ್ ಟೈಟಾಗಿ ಕುಸಿದು ಬಿದ್ದಿದ್ದಾನೆ. ಶಸ್ತ್ರ ಚಿಕಿತ್ಸೆಗೆ‌ ಎಲ್ಲಾ ಸಿದ್ದತೆ ಮಾಡಿಕೊಳ್ಳುವ ವೇಳೆ ಆಪರೇಷನ್ ಥಿಯೇಟರ್​ನಲ್ಲಿ ವೈದ್ಯ ಬಾಲಕೃಷ್ಣ ಕುಸಿದು ಬಿದ್ದಿದ್ದಾನೆ. ಅಸ್ವಸ್ಥಗೊಂಡ ವೈದ್ಯನನ್ನ ಸಿಬ್ಬಂದಿಗಳು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

 ಇತ್ತ ಬೆಳಗ್ಗೆ 8 ಗಂಟೆಗೆ ಅನಸ್ತೇಶಿಯಾ ನೀಡಿ ಮಧ್ಯಾಹ್ನ 2 ಗಂಟೆಯಾದರೂ ಆಪರೇಷನ್ ಮಾಡಿಲ್ಲ. ಹೋಗಿ ನೋಡಿದಾಗ ಬೆಳಗ್ಗೆಯಿಂದ ಆಪರೇಷನ್ ಥಿಯೇಟರ್​ನಲ್ಲೆ ವೈದ್ಯ ನಿದ್ರೆ ಮಾಡಿದ್ದಾನೆ. ಶಸ್ತ್ರ ಚಿಕಿತ್ಸೆಗೆ ವೈದ್ಯರಿಲ್ಲದೆ ಅನಸ್ತೇಶಿಯಾ ಪಡೆದ ಮಹಿಳೆಯರ ಪರದಾಡುತ್ತಿದ್ದರು. ಬಳಿಕ ವೈದ್ಯ ಬಾಲಕೃಷ್ಣ ವಿರುದ್ಧ ಶಿಸ್ತು ಕ್ರಮಕ್ಕೆ‌ ರೋಗಿಗಳ ಸಂಬಂಧಿಕರು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!