Tuesday, July 1, 2025
Homeಕರಾವಳಿಉಡುಪಿಉಡುಪಿ: ಹಿಜಾಬ್‌ ವಿದ್ಯಾರ್ಥಿನಿಯರು ಹೈಕೋರ್ಟ್ ಗಿಂತ ಮೇಲಾ? ನಾಳೆ ಮತ್ತೆ ಡ್ರಾಮಾ ಮಾಡಿದರೆ ಸಹಿಸುವುದಿಲ್ಲ: ಶಾಸಕ...

ಉಡುಪಿ: ಹಿಜಾಬ್‌ ವಿದ್ಯಾರ್ಥಿನಿಯರು ಹೈಕೋರ್ಟ್ ಗಿಂತ ಮೇಲಾ? ನಾಳೆ ಮತ್ತೆ ಡ್ರಾಮಾ ಮಾಡಿದರೆ ಸಹಿಸುವುದಿಲ್ಲ: ಶಾಸಕ ರಘುಪತಿ ಭಟ್‌ ಆಕ್ರೋಶ

spot_img
- Advertisement -
- Advertisement -

ಉಡುಪಿ: ಇಂದು ಪರೀಕ್ಷೆ ಬರೆಯಲು ಬಂದ ಹಿಜಾಬ್ ದಾರಿ ವಿದ್ಯಾರ್ಥಿನಿಯರು ಹೈಡ್ರಾಮಾ ಮಾಡಿದ್ದಾರೆ, ನಾಳೆ ಮತ್ತೆ ವಿಜ್ಞಾನ ವಿಭಾಗದ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಕೇಂದ್ರಕ್ಕೆ ಬಂದು ನಾಟಕ ಮಾಡಿದರೆ ಕ್ರಿಮಿನಲ್ ಕೇಸ್ ಹಾಕುತ್ತೇವೆ ಎಂದು ಶಾಸಕ ರಘುಪತಿ ಭಟ್ ಹಿಜಾಬ್ ಹೋರಾಟಗಾರ್ತಿಯರಿಗೆ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಮಾಧ್ಯದೊಂದಿಗೆ ಮಾತನಾಡಿದ ಅವ್ರು, ಇದೊಂದು ಷಡ್ಯಂತ್ರ ಅನ್ನುವುದು ಸಾಬೀತಾಗಿದೆ. ಇವರ ನಾಟಕಕ್ಕೆ ತಾತ್ವಿಕ ಅಂತ್ಯ ಹಾಡಲೇ ಬೇಕು. ನಿನ್ನೆ ಸಂಜೆವರಿಗೆ ಫೋನ್ ಮಾಡಿ ಹಾಲ್ ಟಿಕೆಟ್ ಪಡೆಯಲು ಹೇಳಿದ್ದೆವು. ಬೆಳಗಿನವರೆಗೂ ಹಾಲ್ ಟಿಕೆಟ್ ಪಡೆಯಲು ಬರಲಿಲ್ಲ. ಇಂದು ಬೆಳಿಗ್ಗೆ ಒಂಬತ್ತು ಮೂವತ್ತಕ್ಕೆ ಕಾಲೇಜಿಗೆ ಬಂದರು. ಹಿಜಾಬ್ ತೆಗೆದಿಟ್ಟು ಹೋದರೆ ಮಾತ್ರ ಹಾಲ್ ಟಿಕೆಟ್ ಕೊಡುವುದಾಗಿ ಪ್ರಾಂಶುಪಾಲರು ಹೇಳಿದ್ದರು. ಹಿಜಾಬ್ ತೆಗೆದು ಹಾಲ್ ಟಿಕೆಟ್ ಪಡೆದುಕೊಂಡು ಹೋಗಿದ್ದಾರೆ. ನಂತರ ಎಕ್ಸಾಮ್ ಸೆಂಟರ್ ಗೆ ಹೋಗಿ ಡ್ರಾಮಾ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆ ಮಾತನಾಡಿದ್ದೇನೆ. ನಾಳೆ ಮತ್ತೆ ನಾಟಕ ಮಾಡಿದರೆ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲು ಹೇಳಿದ್ದೇನೆ. ಅವರ ವಿರುದ್ಧ ಕ್ರಿಮಿನಲ್ ಕೇಸ್ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದೇನೆ ಅಂದ್ರು.

- Advertisement -
spot_img

Latest News

error: Content is protected !!