Thursday, May 16, 2024
Homeತಾಜಾ ಸುದ್ದಿಉಜಿರೆ: ಸರಕಾರಿ ಜಮೀನಿನಲ್ಲಿ ನಿವೇಶನ ನೀಡುವ ಕುರಿತು ವಿವಾದ- ತಂಡದಿಂದ ಹಲ್ಲೆ ನಡೆಸಿ, ಮಾನಹಾನಿಗೆ ಯತ್ನ

ಉಜಿರೆ: ಸರಕಾರಿ ಜಮೀನಿನಲ್ಲಿ ನಿವೇಶನ ನೀಡುವ ಕುರಿತು ವಿವಾದ- ತಂಡದಿಂದ ಹಲ್ಲೆ ನಡೆಸಿ, ಮಾನಹಾನಿಗೆ ಯತ್ನ

spot_img
- Advertisement -
- Advertisement -

ಉಜಿರೆ: ಸರಕಾರಿ ಜಮೀನಿನಲ್ಲಿ ನಿವೇಶನ ನೀಡುವ ವಿಚಾರದಲ್ಲಿ ತಂಡವೊಂದು ಹಲ್ಲೆ ನಡೆಸಿ, ಮಾನಹಾನಿ ಮಾಡಲು ಮುಂದಾದ ಘಟನೆ ಉಜಿರೆ ಗ್ರಾಮದ ಅಳಕೆ ಎಂಬಲ್ಲಿ ನಡೆದಿದೆ. ಈ ಬಗ್ಗೆ ಸುರೇಖಾ ಅವರು ಎ.21 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಳಕೆ ನಿವಾಸಿ ಸಂದೀಪ್, ಸಂತೋಷ್, ಗುಲಾಬಿ, ಕುಸುಮ, ಲೋಕಯ್ಯ, ಅನಿಲ್, ಲಲಿತ, ಚೆನ್ನಕೇಶವ ಎಂಬವರ ಮೇಲೆ ಈ ದೂರು ನೀಡಲಾಗಿದೆ.

ಎ.19 ರಂದು ಸುರೇಖಾರವರ ಅಕ್ಕ ಜ್ಯೋತಿ, ಮನೆ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ನಿಂತಿದ್ದ ವೇಳೆ ಅವರಿಗೆ ಹಲ್ಲೆ ಮಾಡಿ ಬಟ್ಟೆ ಎಳೆಯಲು ಮುಂದಾಗಿದ್ದು ಇದನ್ನು ತಡೆಯಲು ಹೋದ ಸುರೇಖ ಎಂಬವರಿಗೆ ಹಲ್ಲೆ ನಡೆಸಿ ಸಾರ್ವಜನಿಕ ಸ್ಥಳದಲ್ಲಿ ಧರಿಸಿದ್ದ ಬಟ್ಟೆಯನ್ನು ಹರಿದು ಮಾನಹಾನಿ ಮಾಡಲು ಮುಂದಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನು ತಡೆಯಲು ಹೋದ ಸುರೇಖರವರ ತಾಯಿ ಲೀಲಾ ಎಂಬವರಿಗೆ ಇಬ್ಬರು ದೊಣ್ಣೆಯಿಂದ ಹಲ್ಲೆ ಮಾಡಿದ್ದಲ್ಲದೆ ಇದನ್ನು ತಡೆಯಲು ಹೋದ ಯತೀಶ್ ಎಂಬವರಿಗೆ ಹೊಡೆದಿದ್ದಾರೆ. ಅಲ್ಲದೆ ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಜೀವ ಬೆದರಿಕೆಯನ್ನು ಒಡ್ಡಿದ್ದಾರೆ ಎಂದು ದೂರಿನಲ್ಲಿ ಅಪಾದಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ 9 ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!