Wednesday, May 1, 2024
Homeಕರಾವಳಿಮಂಗಳೂರಿನಿಂದ ಮೊದಲ ಬಾರಿಗೆ ರೈಲಿನಲ್ಲಿ ಕೇರಳದ ಅಜ್ಜನ ಮನೆಗೆ ಹೊರಟ ಮಗ: ರೈಲು ಹತ್ತಿದ ಮಗ...

ಮಂಗಳೂರಿನಿಂದ ಮೊದಲ ಬಾರಿಗೆ ರೈಲಿನಲ್ಲಿ ಕೇರಳದ ಅಜ್ಜನ ಮನೆಗೆ ಹೊರಟ ಮಗ: ರೈಲು ಹತ್ತಿದ ಮಗ ಸಂಪರ್ಕಕ್ಕೆ ಸಿಗದೆ ಪೋಷಕರು ಕಂಗಾಲು: ಹೆತ್ತವರಿಗೆ ಕೆಲವೇ ನಿಮಿಷಗಳಲ್ಲಿ ಸ್ಪಂದಿಸಿದ ರೈಲ್ವೇ ಸಚಿವರು

spot_img
- Advertisement -
- Advertisement -

ಮಂಗಳೂರು: ಮೊದಲ ಬಾರಿಗೆ ಒಬ್ಬಂಟಿಯಾಗಿ ಮಂಗಳೂರಿನಿಂದ ಕೇರಳಕ್ಕೆ ರೈಲು ಪ್ರಯಾಣ ಮಾಡುತ್ತಿದ್ದ ಬಾಲಕ, ಸಂಪರ್ಕಕ್ಕೆ ಸಿಗದೇ ಪೋಷಕರು ಕಂಗಾಲಾಗಿದ್ದರು. ರೈಲ್ವೆ ಇಲಾಖೆಯನ್ನು ಟ್ಯಾಗ್‌ ಮಾಡಿ ಟ್ವೀಟ್ ಮಾಡಿದ 34 ನಿಮಿಷಗಳ ಒಳಗೆಯೇ ಪುತ್ರನಿಂದ, ಪೋಷಕರಿಗೆ ಬಂದಿದೆ. ಮಂಗಳೂರಿನಿಂದ ಕೊಟ್ಟಾಯಂಗೆ ಪ್ರಯಾಣಿಸಿದ ಬಾಲಕನ ವಿಚಾರದಲ್ಲಿಯೂ ತಕ್ಷಣವೇ ಸ್ಪಂದಿಸಿರುವ ರೈಲ್ವೆ ಇಲಾಖೆಯ ಬದ್ಧತೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಮಂಗಳೂರಿನ  ಅಟೋಮೊಬೈಲ್ ಕಂಪನಿಯಲ್ಲಿ ಮ್ಯಾನೇಜರ್ ಆಗಿರುವ ಕಿಶನ್‌ ರಾವ್ ಅವರ 16 ವರ್ಷದ ಪುತ್ರ ಶಂತನು, ಏ. 19ರಂದು ಬೆಳಿಗ್ಗೆ 5 ಗಂಟೆಗೆ ಕೊಟ್ಟಾಯಂನಲ್ಲಿರುವ ತಮ್ಮ ಅಜ್ಜನ ಮನೆಗೆಂದು ಮಂಗಳೂರಿನಿಂದ ಪ್ರಯಾಣ ಬೆಳೆಸಿದ್ದ. ಬಾಲಕ ಏಕಾಂಗಿಯಾಗಿ ತೆರಳುವ ಕಾರಣ ಪೋಷಕರು ಆತನಿಗೆ ಮೊಬೈಲ್ ಫೋನ್ ನೀಡಿದ್ದರು. ಕೊಟ್ಟಾಯಂ ನಿಲ್ದಾಣದಲ್ಲಿ ಸಂಬಂಧಿಗಳು ಆತನನ್ನು ಬರಮಾಡಿಕೊಳ್ಳುವವರಿದ್ದರು.

ಈ ಬಾಲಕ ಪ್ರಯಾಣಿಸಿದ ಪರಶುರಾಮ ಎಕ್ಸ್‌ಪ್ರೆಸ್‌ ರೈಲು, ಎರ್ನಾಕುಲಂ ಹಾಗೂ ಕೊಟ್ಟಾಯಂ ನಡುವಿನ ಪಿರವಂ ರೈಲು ನಿಲ್ದಾಣವನ್ನು ಮಧ್ಯಾಹ್ನ 2.30ಕ್ಕೆ ತಲುಪಬೇಕಿತ್ತು. ಬೆಳಿಗ್ಗೆ 10 ಗಂಟೆ ಸುಮಾರಿಗೆ ಪೋಷಕರು ಆತನಿಗೆ ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿತ್ತು. ಪದೇ ಪದೇ ಕರೆ ಮಾಡಿದಾಗಲೂ ಅದೇ ರೀತಿ ಮುಂದುವರಿದಿತ್ತು.

ಆತಂಕಗೊಂಡ ತಂದೆ ಕಿಶನ್ ರಾವ್ ಅವರು, ಪುತ್ರನ ರೈಲ್ವೆ ಟಿಕೆಟ್ ನಂಬರ್ ಸಹಿತ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಟ್ವೀಟ್ ಮಾಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತವಾದ ರೈಲ್ವೆ ಸಚಿವಾಲಯದ ಅಧಿಕಾರಿಗಳು, ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಲಕ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಪರಿಶೀಲಿಸಿದಾಗ ಆತ ಸುರಕ್ಷಿತವಾಗಿ ಇರುವುದನ್ನು ಖಾತರಿಪಡಿಸಿಕೊಂಡು ಪೊಲೀಸರು, ತಂದೆಗೆ ಕರೆ ಮಾಡುವಂತೆ ತಿಳಿಸಿದ್ದಾರೆ.

ತಕ್ಷಣ ಆತ ತನ್ನ ತಂದೆಗೆ ಕರೆ ಮಾಡಿ ತಾನು ಕ್ಷೇಮವಾಗಿರುವುದಾಗಿ ತಿಳಿಸಿದ್ದಾನೆ. ‘ರೈಲಿನಲ್ಲಿ ನಿದ್ರೆಗೆ ಜಾರಿದ್ದೆ. ಫೋನ್ ಹೇಗೆ ಸ್ವಿಚ್ ಆಫ್ ಆಯಿತು ಎಂಬುದು ಗೊತ್ತಾಗಿಲ್ಲ’ ಎಂದು ಆತ ತಿಳಿಸಿದ್ದಾನೆ. ಈ ಎಲ್ಲ ಪ್ರಕ್ರಿಯೆ ಕೇವಲ 34 ನಿಮಿಷದಲ್ಲಿಯೇ ನಡೆದಿದ್ದು, ಕಿಶನ್ ರಾವ್ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಸಚಿವಾಲಯ ಹಾಗೂ ರೈಲ್ವೆ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!