Monday, May 20, 2024
HomeUncategorizedನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್‍ ಇದ್ದರೆ ತಕ್ಷಣ ಡಿಲೀಟ್ ಮಾಡಿಬಿಡಿ!

ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್‍ ಇದ್ದರೆ ತಕ್ಷಣ ಡಿಲೀಟ್ ಮಾಡಿಬಿಡಿ!

spot_img
- Advertisement -
- Advertisement -

ನವದೆಹಲಿ : ಅಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಸಂಶೋಧಕರು ಬಹುಮುಖ್ಯವಾದ ಮಾಹಿತಿಯೊಂದನ್ನು ನೀಡಿದ್ದು, ಸ್ಮಾರ್ಟ್ ಫೋನ್ ನಲ್ಲಿ ಸ್ನ್ಯಾಪ್ ಟ್ಯೂಬ್ ಎಂಬ ಆ್ಯಪ್‍ ಇದ್ದರೆ ಡಿಲೀಟ್ ಮಾಡುವಂತೆ ತಿಳಿಸಿದ್ದಾರೆ.

ಹೌದು, ಸ್ಮಾರ್ಟ್ ಪೋನ್ ನಲ್ಲಿ ಈ ಸ್ನ್ಯಾಪ್ ಟ್ಯೂಬ್ ಆ್ಯಪ್‍ ಇದ್ದರೆ ನಿಮಗೇ ಗೊತ್ತಿಲ್ಲದಂತೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣಕ್ಕೆ ಕನ್ನ ಹಾಕುತ್ತಾರೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ಅಪ್ ಸ್ಟ್ರೀಮ್ ಸಿಸ್ಟಮ್ ವರದಿಯ ಪ್ರಕಾರ ಸ್ನ್ಯಾಪ್ ಟ್ಯೂಬ್ ಆಯಪ್ ಡೌನ್ ಲೋಡ್ ಮಾಡಿಕೊಂಡಿದ್ದರೆ, ನಮಗೆ ಗೊತ್ತಿಲ್ಲದಂತೆ ಲಾಗಿನ್ ಆಗಿ ಪ್ರೀಮಿಯನ್ ಸೇವೆಯನ್ನು ಬಳಸಿಕೊಂಡು ನಮ್ಮ ಬ್ಯಾಂಕ್ ಖಾತೆಯಿಂದ ಹಣ ಎಗರಿಸುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಬಿಚ್ಚಿಟ್ಟಿದೆ.

ಸ್ಯ್ನಾಪ್ ಆಯಪ್ ಯೂಟ್ಯೂಬ್ ಮತ್ತು ಫೇಸ್ ಬುಕ್ ಮೂಲಕ ವಿಡಿಯೋ ಡೌನ್ ಲೋಡ್ ಮಾಡಿಕೊಳ್ಳಲು ಈ ಆ್ಯಪ್‍ ಬಳಸಿಕೊಳ್ಳಲಾಆಗುತ್ತದೆ. ಈಗಾಗಲೇ 40 ಮಿಲಿಯನ್ ಗೂ ಹೆಚ್ಚು ಡೌನ್ ಲೋಡ್ ಸಹ ಆಗಿದೆ. ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಪ್ಲೇ ಸ್ಟೋರ್ ನಿಂದ ಈ ಆಯಪ್ ನ್ನು ತೆಗೆದುಹಾಕಲಾಗಿದೆ. ಆದರೆ, ಈಗಾಗಲೇ ಡೌನ್ ಲೋಡ್ ಮಾಡಿಕೊಂಡು ಲಾಗ್ ಆಫ್ ಮಾಡದೇ ಅನ್ ಇನ್ ಸ್ಟಾಲ್ ಮಾಡಿದ್ದರೆ ಅಂತವರ ಖಾತೆಗೆ ಕನ್ನ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!