Monday, May 6, 2024
Homeಕರಾವಳಿಮುಗೇರಡ್ಕ: ಶ್ರಮಿಕ ನೆರವು ಕಾರ್ಯಕ್ರಮದ ಅಡಿಯಲ್ಲಿ ನಾಡದೋಣಿ ಸೇವೆ ಆರಂಭ

ಮುಗೇರಡ್ಕ: ಶ್ರಮಿಕ ನೆರವು ಕಾರ್ಯಕ್ರಮದ ಅಡಿಯಲ್ಲಿ ನಾಡದೋಣಿ ಸೇವೆ ಆರಂಭ

spot_img
- Advertisement -
- Advertisement -

ಬಂದಾರು: ಕಳೆದ ವರ್ಷದ ಮಳೆಗೆ ಬೆಳ್ತಂಗಡಿ ತಾಲೂಕಿನ ಮುಗೇರಡ್ಕ-ಬಜತ್ತೂರು ಸಂಪರ್ಕಿಸುವ ತೂಗು ಸೇತುವೆ ಕೊಚ್ಚಿ ಹೋಗಿದ್ದು, ಹೊಸ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಈ ಜಾಗದಲ್ಲಿ ತೂಗು ಸೇತುವೆ ಇಲ್ಲದ ಕಾರಣಕ್ಕೆ ಈ ತಾಲೂಕಿನ ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರು ಹತ್ತಿರದ ಪಟ್ಟಣವಾದ ಉಪ್ಪಿನಂಗಡಿಗೆ ಹೋಗಿ ಬರಲು ಹತ್ತಾರು ಕಿಲೋಮೀಟರ್ ದೂರವನ್ನು ಕ್ರಮಿಸಬೇಕಾಗುತ್ತದೆ. ಮಳೆಗಾಲದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಶಾಸಕ ಹರೀಶ್ ಪೂಂಜರ ನೇತೃತ್ವದ ಶ್ರಮಿಕನೆರವು ಕಾರ್ಯಕ್ರಮದ ಅಡಿಯಲ್ಲಿ ಇಂದು ನಾಡದೋಣಿ ಸೇವೆಯನ್ನು ಆರಂಭಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಮಂಡಲ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಗೌಡ, ಇಳಂತಿಲ.ತಾ.ಪಂಚಾಯತ್. ಸದಸ್ಯ ಕೃಷ್ಣಯ್ಯ ಆಚಾರ್ಯ, ಮಹಾ ಶಕ್ತಿಯ ಮಂಡಲ ಮೊಗ್ರು ಕಾರ್ಯದರ್ಶಿ, ಬಾಲಕೃಷ್ಣ ಗೌಡ ಮೊದಲಾದವರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!