Friday, June 5, 2026
Homeಕರಾವಳಿಮಂಗಳೂರುಕೇರಳದಲ್ಲಿ ಮಂಕಿ ಫಾಕ್ಸ್ ಸೋಂಕು ಭೀತಿ ಹಿನ್ನೆಲೆ; ದ.ಕ.‌ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಿಂದ ನಿಗಾ

ಕೇರಳದಲ್ಲಿ ಮಂಕಿ ಫಾಕ್ಸ್ ಸೋಂಕು ಭೀತಿ ಹಿನ್ನೆಲೆ; ದ.ಕ.‌ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಿಂದ ನಿಗಾ

- Advertisement -
- Advertisement -

ಮಂಗಳೂರು: ಕೇರಳದಲ್ಲಿ ಮಂಕಿ ಫಾಕ್ಸ್ ಸೋಂಕು ಭೀತಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಗಾ ವಹಿಸಲಾಗಿದೆ.

ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಮತ್ತು ಮಂಗಳೂರು ಬಂದರಿನಲ್ಲೂ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಲಾಗಿದ್ದು, ಜಿಲ್ಲೆಗೆ ಆಗಮಿಸುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.ಸೋಂಕಿತ ರೋಗಿಗಳ ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಅನ್ನು ಆರೋಗ್ಯ ಇಲಾಖೆ ಕಾಯ್ದಿರಿಸಿದೆ.

ಸೋಂಕಿನಿಂದ ಮೈಮೇಲೆ ದೊಡ್ಡ ದೊಡ್ಡ ಗಾತ್ರದ ಗುಳ್ಳೆಗಳು ಬಂದು ಗುಳ್ಳೆಯಲ್ಲಿ ನೀರು ತುಂಬುತ್ತದೆಯಲ್ಲದೇ, ರೋಗ ಬಂದು ಗುಣ ಆಗುವವರೆಗೂ ಆ ವ್ಯಕ್ತಿಯಿಂದ ಸೋಂಕು ಹರಡುವ ಸಾಧ್ಯತೆ ಇದೆ ಎನ್ನಲಾಗಿದೆ.

- Advertisement -

Latest News

error: Content is protected !!