Tuesday, May 14, 2024
Homeಕರಾವಳಿಮಂಗಳೂರು : ಸೋಮೇಶ್ವರ ಬೀಚ್‌ ತಡ ರಾತ್ರಿ ಡಿಜೆ ಪಾರ್ಟಿ;ಸ್ಥಳೀಯರಿಂದ ದೂರು

ಮಂಗಳೂರು : ಸೋಮೇಶ್ವರ ಬೀಚ್‌ ತಡ ರಾತ್ರಿ ಡಿಜೆ ಪಾರ್ಟಿ;ಸ್ಥಳೀಯರಿಂದ ದೂರು

spot_img
- Advertisement -
- Advertisement -

ಮಂಗಳೂರು:  ಸೋಮೇಶ್ವರ ಬೀಚ್‌ ಮತ್ತು ಅಲ್ಲಿನ ಬೀಚ್‌ ಉದ್ದಕ್ಕೂ ತಡ ರಾತ್ರಿ ತನಕವೂ ಪಾರ್ಟಿ ಹಾಗೂ ಸಭೆ ನಡೆಸಿ, ಡಿಜೆ ಹಾಕಿ ಶಬ್ದ ಮಾಲಿನ್ಯ ಉಂಟು ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಉಳ್ಳಾಲ ರೈಲು ನಿಲ್ದಾಣದಿಂದ ತಲಪಾಡಿ ಬಟ್ಟಂಪಾಡಿವರೆಗಿನ ಬೀಚ್‌ನಲ್ಲಿ ರೆಸಾರ್ಟ್‌ಗಳು ಮತ್ತು ಹಲವಾರು ಗೆಸ್ಟ್‌ ಹೌಸ್‌ಗಳು ಇದ್ದು, ಅಲ್ಲೆಲ್ಲ ರಾತ್ರಿ ವೇಳೆ ಸಭೆ, ಸಮಾರಂಭಗಳು, ಪಾರ್ಟಿಗಳು ನಡೆಯುತ್ತಿರುತ್ತವೆ. ಕೆಲವು ಪಾರ್ಟಿಗಳು ತಡ ರಾತ್ರಿ ಕಳೆದರೂ ನಡೆಯುತ್ತಿರುತ್ತವೆ. ಬಹುತೇಕ ಕಡೆ ಡಿಜೆ ಹಾಕಿ ಕರ್ಕಶ ಶಬ್ದ ಮಾಡಲಾಗುತ್ತದೆ.ಇದರಿಂದ ನೆಮ್ಮದಿಯಿಂದ ನಿದ್ರೆ ಮಾಡುತ್ತಿರುವ ಸ್ಥಳೀಯ ಜನರಿಗೆ ತೊಂದರೆ ಆಗುತ್ತಿದ್ದು, ಡಿಜೆ ಶಬ್ದದ ತೀವ್ರತೆಗೆ ಭೂಮಿ, ಕಟ್ಟಡಗಳು ಕಂಪಿಸಿದ ಅನುಭವ ಆಗುತ್ತಿದೆ’ ಎನ್ನುವುದು ಸ್ಥಳೀಯರ ಆರೋಪ.ಈ ಬಗ್ಗೆ ನಾವು ಈ ಹಿಂದೆ ಉಳ್ಳಾಲ ಪೊಲೀಸರು, ಸೋಮೇಶ್ವರ ಪುರಸಭೆ ಮತ್ತು ಇತರ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಇದುವರೆಗೂ ಕಟ್ಟು ನಿಟ್ಟಿನ ಕ್ರಮ ಆಗಿಲ್ಲ ಎಂದು ಸೋಮೇಶ್ವರ ಪರಿಸರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಮಿತಿ ಸದಸ್ಯರು ಆರೋಪಿಸಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕೆಂದು ಅವರು ಆಗ್ರಹಿಸಿದ್ದಾರೆ.

ಬೀಚ್‌ನಲ್ಲಿ ಅನಧಿಕೃತವಾಗಿ ಕಾರ್ಯಕ್ರಮ ನಡೆಸುವಂತಿಲ್ಲ.ಹಾಗೆ ಮಾಡಿದಲ್ಲಿ ಕಾರ್ಯಕ್ರಮ ನಡೆಸಿದವರಿಗೆ 5,000ದಿಂದ 10,000 ರೂ.ಗಳ ತನಕ ದಂಡ ವಿಧಿಸಿದ ಉದಾಹರಣೆ ಇದೆ ಎಂದು ಸೋಮೇಶ್ವರ ಪುರಸಭೆಯ ಮೂಲಗಳು ತಿಳಿಸಿವೆ

- Advertisement -
spot_img

Latest News

error: Content is protected !!