Wednesday, May 1, 2024
Homeಜ್ಯೋತಿಷ್ಯದಿನಭವಿಷ್ಯ: ಈ ರಾಶಿಯವರಿಗೆ ಇಂದು ಕೃಷಿ ಮೂಲದಿಂದ ಧನಾಗಮನವಾಗುವ ಸಾಧ್ಯತೆ

ದಿನಭವಿಷ್ಯ: ಈ ರಾಶಿಯವರಿಗೆ ಇಂದು ಕೃಷಿ ಮೂಲದಿಂದ ಧನಾಗಮನವಾಗುವ ಸಾಧ್ಯತೆ

spot_img
- Advertisement -
- Advertisement -

ಮೇಷ: ಕುಟುಂಬದವರೊಂದಿಗೆ ಮನಸ್ತಾಪವಾಗಿ ಪ್ರಮುಖ ನಿರ್ಧಾರ ವಿಳಂಬ. ಉದ್ಯೋಗದ ವಿಚಾರದಲ್ಲಿ ಯಶಸ್ಸು. ಮಹಿಳೆಯರಿಗೆ ಆಭರಣ ಲಾಭ. ಶುಭ ಸಂಖ್ಯೆ 8

ವೃಷಭ: ಸಾರ್ವಜನಿಕವಾಗಿ ತಾಳ್ಮೆಯಿಂದ ವರ್ತಿಸಿ. ಪಾಲುದಾರಿಕೆ ವ್ಯವಹಾರದಲ್ಲಿ ವೈಮನಸ್ಯ. ಸಜ್ಜನರ ಸಹವಾಸ. ಶುಭಸಂಖ್ಯೆ 1

ಮಿಥುನ: ಮಕ್ಕಳ ಭವಿಷ್ಯದ ಚಿಂತೆ. ಎಲ್ಲಾ ಕಡೆ ಹಸನ್ಮುಖಿಗಳಾಗಿ. ಆತ್ಮೀಯರ ವಿಯೋಗದ ನೋವು ಕಾಡಲಿದೆ. ಶುಭಸಂಖ್ಯೆ 3.

ಕಟಕ: ಗುರು ಹಿರಿಯರ ಭೇಟಿ. ಕುಟುಂಬದೊಂದಿಗೆ ಪ್ರವಾಸ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ವಾಗ್ವಾದ. ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗವಹಿಸಿ. ಶುಭ ಸಂಖ್ಯೆ 9

ಸಿಂಹ: ಕಠಿಣ ಶ್ರಮಕ್ಕೆ ನಿರೀಕ್ಷಿತ ಫಲ ಇಲ್ಲದಿರಬಹುದು, ಎದೆಗುಂದ ಬೇಡಿ. ಮಕ್ಕಳಿಂದ ಹಣದ ದುಂದುವೆಚ್ಚ. ನಂಬಿದವ ರಿಂದಲೇ ಮೋಸ ಹೋಗುವ ಸಾಧ್ಯತೆ. ಶುಭ ಸಂಖ್ಯೆ 8

ಕನ್ಯಾ: ಆಸ್ತಿ ವಿಚಾರದಲ್ಲಿ ಪ್ರಮುಖ ತಿರುವು. ನೂತನ ವಸ್ತು ಖರೀದಿ ಸಾಧ್ಯತೆ. ಹಿತೈಷಿಗಳು ನಿಮ್ಮ ಬಗ್ಗೆ ಅಪಪ್ರಚಾರ ಮಾಡಬಹುದು. ಶುಭ ಸಂಖ್ಯೆ 7

ತುಲಾ: ಸಾರ್ವಜನಿಕ ಜೀವನದಲ್ಲಿ ಮಾನಸನ್ಮಾನ ಸಿಗಲಿದೆ. ಭೂ ವ್ಯವಹಾರ ಮಾಡುವವರಿಗೆ ಅನಿರೀಕ್ಷಿತ ಲಾಭ. ಮಗಳ ಉನ್ನತ ವಿದ್ಯಾಭ್ಯಾಸದ ಕನಸು ನನಸು. ಶುಭ ಸಂಖ್ಯೆ 5

ವೃಶ್ಚಿಕ: ಕಚೇರಿಯಲ್ಲಿ ಬಿಗುವಿನ ವಾತಾವರಣ. ನಿಮ್ಮ ಕರ್ತವ್ಯನಿಷ್ಠೆ ಯಿಂದ ಮನ್ನಣೆ ಗಳಿಸುವಿರಿ. ಕೃಷಿ ಮೂಲದಿಂದ ಧನಾಗಮನ. ವಾಹನ ಖರೀದಿಗೆ ನಿರ್ಧಾರ. ಶುಭ ಸಂಖ್ಯೆ 6

ಧನುಸ್ಸು: ಶ್ರದ್ಧೆ ವಹಿಸಿ ನಿರ್ವಹಿಸಿದ ಕೆಲಸದಲ್ಲಿ ವಿಶೇಷ ಪ್ರಗತಿ. ದೀರ್ಘ ಪ್ರಯಾಣ ಸಂಭವ. ಸ್ವಯಂ ಉದ್ಯೋಗದಲ್ಲಿ ಕಾರ್ವಿುಕರ ಅಭಾವ. ಅವಿವಾಹಿತರಿಗೆ ವಿವಾಹ ಸಿದ್ಧಿ. ಶುಭ ಸಂಖ್ಯೆ 7

ಮಕರ: ದಾಂಪತ್ಯ ಜೀವನ ಸುಖಮಯ. ವಿದ್ಯಾರ್ಥಿಗಳ ಬಹಳ ದಿನಗಳ ಕನಸು ನನಸು. ಮೇಲಧಿಕಾರಿಗಳ ವಿಶ್ವಾಸಕ್ಕೆ ಪಾತ್ರರಾಗುವಿರಿ. ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ 3

ಕುಂಭ: ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳಲ್ಲಿ ಅಭಿವೃದ್ಧಿ. ಕೃಷಿ ಭೂಮಿ ಖರೀದಿಗೆ ನಿರ್ಧಾರ. ಸಹೋದರರಿಂದ ಪ್ರತಿರೋಧ. ಹಿತೈಷಿಗಳ ಸಲಹೆ ಪಾಲಿಸಿ. ಶುಭ ಸಂಖ್ಯೆ 4

ಮೀನ: ಆತ್ಮೀಯರ ವಿಯೋಗ. ಸಹನೆಯಿಂದ ವರ್ತಿಸಿ. ಆಸ್ತಿ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲು ಏರುವ ಪ್ರಸಂಗ. ವ್ಯಾಪಾರದಲ್ಲಿ ಧನಲಾಭ. ಶುಭ ಸಂಖ್ಯೆ 1

- Advertisement -
spot_img

Latest News

error: Content is protected !!