Saturday, June 6, 2026
Homeಇತರಬೆಳ್ತಂಗಡಿ ವಕೀಲರ ಸಂಘದಿಂದ ದೀಪಾವಳಿಯ ಸಂಭ್ರಮಾಚರಣೆ; ವಕೀಲ ಮಿತ್ರರಿಗೆ 'ಪರ್ಬದ ದೋಸೆ'

ಬೆಳ್ತಂಗಡಿ ವಕೀಲರ ಸಂಘದಿಂದ ದೀಪಾವಳಿಯ ಸಂಭ್ರಮಾಚರಣೆ; ವಕೀಲ ಮಿತ್ರರಿಗೆ ‘ಪರ್ಬದ ದೋಸೆ’

- Advertisement -
- Advertisement -

ಬೆಳ್ತಂಗಡಿ: ವಕೀಲರ ಸಂಘ(ರಿ) ಬೆಳ್ತಂಗಡಿ ವತಿಯಿಂದ ನಗರದ ವಕೀಲ ಭವನದ ಎದುರು ಬುಧವಾರದಂದು ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಳಕಿನ ಸಂಕೇತವಾದ ಹಣತೆಗಳನ್ನು ಹಚ್ಚಲಾಯಿತು. ಜೊತೆಗೆ ಹಬ್ಬದ ಪ್ರಯುಕ್ತ ಎಲ್ಲಾ ವಕೀಲ ಬಂಧುಗಳಿಗೂ ಹಬ್ಬದ ದೋಸೆಯನ್ನು ಕೆಂಪು ಮೆಣಸಿನ ಚಟ್ನಿಯೊಂದಿಗೆ ಸವಿಯುವ ಸುವರ್ಣಾವಕಾಶವನ್ನು ಕಲ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ವಕೀಲರ ಸಂಘ(ರಿ) ಬೆಳ್ತಂಗಡಿಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಹಿರಿಯ ವಕೀಲ ಸಂಘದ ಅಧ್ಯಕ್ಷರು ಹಾಗು ಸರ್ವಸದಸ್ಯರು ಉಪಸ್ಥಿತರಿದ್ದರು.

- Advertisement -

Latest News

error: Content is protected !!