- Advertisement -
![]()
- Advertisement -
ಕೋಟ: ವೃತ್ತಿಯಲ್ಲಿ ವೈದ್ಯರಾಗಿ ಕಳೆದ ಕೆಲವು ವರ್ಷಗಳಿಂದ ಸಮಾಜಕ್ಕೆ ಆಧ್ಯಾತ್ಮಿಕವಾಗಿ ಸೇವೆಯನ್ನ ನೀಡುತ್ತಿದ್ದ ಸಾಲಿಗ್ರಾಮದ ‘ಡಿವೈನ್ ಪಾರ್ಕ್’ ಸಂಸ್ಥಾಪಕ ಡಾ. ಎ. ಚಂದ್ರಶೇಖರ್ ಉಡುಪ ಅವರು 75ನೇ ವಯಸ್ಸಿನಲ್ಲಿ ಜ. 7ರ ಬೆಳಗಿನ ಜಾವ ಹೃದಯಾಘಾತದಿಂದ ದೈವಾಧೀನರಾಗಿದ್ದಾರೆ.
ವಿವೇಕಾನಂದರ ವಿಚಾರಧಾರೆಗಳಿಗೆ ಆಕರ್ಷಿತರಾಗಿದ್ದ ಇವರು ಕೇವಲ ದೈಹಿಕ ಆರೋಗ್ಯವಷ್ಟೇ ಅಲ್ಲದೆ, ಮನಸ್ಸಿನ ಶಾಂತಿ ಮತ್ತು ರಾಷ್ಟ್ರದ ಪ್ರಗತಿಗಾಗಿ ‘ಡಿವೈನ್ ಪಾರ್ಕ್’ ಎಂಬ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ದೇಶ-ವಿದೇಶಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದರು.
ಮೃತರು ಪತ್ನಿ, ಪುತ್ರ ಡಾ. ವಿವೇಕ ಉಡುಪ, ಪುತ್ರಿ ಹಾಗೂ ಸೊಸೆಯನ್ನು ಅಗಲಿದ್ದಾರೆ.
- Advertisement -


