Thursday, June 4, 2026
Homeಕರಾವಳಿಉಡುಪಿಕೊರೋನಾ ಮತ್ತು ಪ್ರವಾಹ ನಿರ್ವಹಣೆ: ಕರಾವಳಿಯ ಸಚಿವರಿಗೆ ಜಿಲ್ಲೆಗಳ ಹಂಚಿಕೆ

ಕೊರೋನಾ ಮತ್ತು ಪ್ರವಾಹ ನಿರ್ವಹಣೆ: ಕರಾವಳಿಯ ಸಚಿವರಿಗೆ ಜಿಲ್ಲೆಗಳ ಹಂಚಿಕೆ

- Advertisement -
- Advertisement -

ಬೆಂಗಳೂರು: ಕರಾವಳಿಯ ಸಚಿವರಿಗೆ ಉಸ್ತುವಾರಿ ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದೆ. ಕೊರೋನಾ ತುರ್ತು ನಿರ್ವಹಣೆ ಮತ್ತು ಪ್ತವಾಹ ಪರಿಹಾರ ಕಾಮಗಾರಿಗಳ ಉಸ್ತುವಾರಿಗಾಗಿ ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದೆ.

ಸಚಿವ ಎಸ್. ಅಂಗಾರ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆ, ಸಚಿವ ವಿ. ಸುನೀಲ್ ಕುಮಾರ್ ಅವರಿಗೆ ಉಡುಪಿ ಜಿಲ್ಲೆ ಮತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೊಡಗು ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಮುಂದಿನ ಆದೇಶದವರೆಗೆ ಈ ಜಿಲ್ಲೆಗಳನ್ನು ಹಂಚಿಕೆ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಅದೇಶ ಹೊರಡಿಸಿದ್ದಾರೆ.

ಇನ್ನು ಚಿಕ್ಕಮಗಳೂರು ಜಿಲ್ಲೆಗೆ ಸಚಿವ ಆರಗ ಜ್ಞಾನೇಂದ್ರ ಅವರಿಗೆ, ಉತ್ತರ ಕನ್ನಡ ಜಿಲ್ಲೆಗೆ ಅರಬೈಲ್ ಶಿವರಾಮ ಹೆಬ್ಬಾರ್ ಅವರಿಗೆ ಉಸ್ತುವಾರಿ ನೀಡಲಾಗಿದೆ. ಇಂದು ಮಧ್ಯಾಹ್ನವಷ್ಟೇ ನೂತನ ಸಚಿವರು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.

- Advertisement -

Latest News

error: Content is protected !!