- Advertisement -
![]()
- Advertisement -
ಪುತ್ತೂರು: ಇಲ್ಲಿನ ಹಿರಿಯ ಪತ್ರಕರ್ತ ಬಿಟಿ ರಂಜನ್ ಅವರು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಇವರು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದು, ಪತ್ರಿಕೋದ್ಯಮದ ಒಳಹೊರಗುಗಳನ್ನು ಚೆನ್ನಾಗಿ ಬಲ್ಲವರು. ಈ ಹಿರಿಯ ಪತ್ರಕರ್ತ ತಮ್ಮ ಬರವಣಿಗೆಯಿಂದ ಭಾರತದ ಶ್ರೇಷ್ಠ ಇಂಟಲಿಜೆನ್ಸ್ ಬ್ಯುರೋ ‘ರಾ’ ವನ್ನೇ ಬೆಚ್ಚಿಬೀಳಿಸಿದ್ದರು.
ಕಳೆದ ಮೂರೂ ದಶಕಗಳಿಂದ ಪತ್ರಿಕೋಧ್ಯಮ ಕ್ಷೇತ್ರದಲ್ಲಿ ದುಡಿಯುತ್ತಿರುವ ಬಿಟಿ ರಂಜನ್ ಬಂಟವಾಳ ದ ತೋನ್ಸೆಯವರು. ಮುಂಗಾರು ಪತ್ರಿಕೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು ಮಂಗಳೂರು ಮಿತ್ರ, ಹೊಸದಿಗಂತ, ಮತ್ತು ಉದಯವಾಣಿ ಪತ್ರಿಕೆಗಳಲ್ಲಿ ಸುದೀರ್ಘ ೨೬ ವರ್ಷ ದುಡಿದವರು. ಸಧ್ಯ ಹೊಸದಿಗಂತ ಪುತ್ತೂರಿನಲ್ಲಿ ಸೇವೆಸಲ್ಲಿಸುತ್ತಿರುವ ಬಿಟಿ ರಂಜನ್ ಗ್ರಾಮೀಣ ಪತ್ರಿಕೋದ್ಯಮದ ಬಗ್ಗೆ ಸಾಕಷ್ಟು ಒಲವು ಹೊಂದಿದ್ದಾರೆ.
- Advertisement -


